ಮೋಜು ತಂದ ‘ಫನ್ ವೀಕ್’

3 LXR-1
ಲಕ್ಷ್ಮೇಶ್ವರದ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಸಿರಿ ಪದವಿ ಮಹಾವಿದ್ಯಾಲಯದಲ್ಲಿ ಫನ್ ವಿಕ್(ಮೋಜಿನ ವಾರ) ಪ್ರಯುಕ್ತ ವಿರ್ದ್ಯಾನಿಯರು ಸೀರೆ ಧರಿಸಿ ಸಂಭ್ರಮಿಸಿದರು.
Published on

ಲಕ್ಷ್ಮೇಶ್ವರ: ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಸಕ್ತಿ ಯುವಕರಲ್ಲಿದೆ ಎಂಬುದಕ್ಕೆ ಬಿಸಿಎನ್ ವಿದ್ಯಾಸಂಸ್ಥೆಯ ಬಿಸಿಎನ್ ಸಿರಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಫನ್ ವೀಕ್’(ಮೋಜಿನ ವಾರ) ಸಾಕ್ಷಿಯಾಯಿತು.

ವಿದ್ಯಾರ್ಥಿಗಳು ವಾರಪೂರ್ತಿ ಬಗೆ ಬಗೆಯ ವೇಷಭೂಷಣ ಧರಿಸಿ ಪ್ರತಿದಿನ ವಿಶೇಷವಾಗಿ ಕಾಣಿಸಿಕೊಂಡರು. ಸಾರಿ ಡೇ, ಗ್ರೀನ್ ಡೇ, ಎಲ್ಲೋ ಡೇ, ಹಳ್ಳಿ ಲೈಫ್ ಸೇರಿ ಒಂದು ವಾರ ನಾನಾ ವೇಷಗಳನ್ನು ತೊಟ್ಟು ವಿವಿಧ ಆಚರಣೆಗಳಳೊಂದಿಗೆ ಮೋಜಿನ ವಾರ ಆಚರಿಸಿದರು. ವಾರವಿಡಿ ಅಭ್ಯಾಸ ಜತೆಗೆ ವಿವಿಧ ಆಚರಣೆಗಳು ಗಮನ ಸೆಳೆದವು. ಗ್ರಾಮೀಣ ಸಂಸ್ಕೃತಿಯ ತೊಟ್ಟು ಬಂದು ಸಂಭ್ರಮಿಸಿದರು. ಬಿಸಿಎನ್ ಸಿರಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ವಿಜಯಕುಮಾರ, ಉಪನ್ಯಾಸಕರಾದ ಖುಷಾ ಅರಳಿ, ಪ್ರೀತಿ ಕಬ್ಬೂರ, ಅಜಮೀರ್ ಹಾರೋಗೇರಿ, ಮಂಜುನಾಥ ಬಂಡಿವಾಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net