ರಂಜಿಸಿದ ಸಂಗೀತೋತ್ಸವ, ಗಾನವೈಭವ

Music Programme in Nelamavu Mutth
Published on

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದಿಂದ ಶ್ರೀ ಲಕ್ಷ್ಮೀನರಸಿಂಹ ಸಂಸ್ಕೃತಿ ಸಂಪದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂಗೀತೋತ್ಸವ ಹಾಗೂ ಗಾನವೈಭವ ಕಾರ್ಯಕ್ರಮ ಕಲಾಸಕ್ತರನ್ನು ರಂಜಿಸಿತು.

ಶ್ರೀರಾಮ ಭಕ್ತಾನುಗ್ರಹ ಸಂಗೀತ ವಿದ್ಯಾಲಯದ ಅನಂತ ಭಾಗ್ವತ್ ಬೆಂಗಳೂರು ಸಂಗಡಿಗರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಎನ್.ಜಿ. ಹೆಗಡೆ ಕಪ್ಪೆಕೆರೆ ಹಾಗೂ ಸಂವಾದಿನಿಯಲ್ಲಿ ದಿನೇಶ ಹೆಗಡೆ ಗಿಳಿಗುಂಡಿ ಸಾಥ್ ನೀಡಿದರು.

ನಂತರ ನಡೆದ ಯಕ್ಷ ಗಾನವೈಭವದಲ್ಲಿ ಭಾಗವತರಾಗಿ ಸುಬ್ರಾಯ ಹೆಗಡೆ ಕಪ್ಪೆಕೆರೆ ಅವರು ಯಕ್ಷಗಾನ ಪದ್ಯವನ್ನು ಹಾಡಿ ರಂಜಿಸಿದರು. ಮದ್ದಳೆಯಲ್ಲಿ ಗಣಪತಿ ಭಾಗವತ್ ಕವ್ವಾಳೆ ಸಾಥ್ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳು ಎಲ್ಲ ಕಲಾವಿದರಿಗೆ ಆಶೀರ್ವಾದ ಮಂತ್ರಾಕ್ಷತೆ ನೀಡಿ ಹರಸಿದರು.
ಜಿ.ಆರ್. ಭಾಗವತ್ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ವಿನಾಯಕ ಭಟ್ಟ ನೆಲೆಮಾವು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net