ಜೂನ್‌ನಲ್ಲಿ ಕೃಷಿ ಕಾರ್ಯಾಗಾರ ಆಯೋಜನೆ: ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಅನಂತರಾವ್ ಮಾಹಿತಿ

Fully Organic Farmers Association Press Conference Mandya
Published on

ಮಂಡ್ಯ: ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ನಿರ್ಮಲ ಭೂಮಾತಾ ಟ್ರಸ್ಟ್ ವತಿಯಿಂದ ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಮಾಡುವ ಸಂಬಂಧ ಜೂ.11ರಿಂದ 13ರವರೆಗೆ ನಾಗಮಂಗಲ ತಾಲೂಕು ಆದಿಚುಂಚನಗಿರಿ ಮಠದ ಆವಣರದಲ್ಲಿ ಸುಭಾಷ್ ಪಾಳೇಕರ್ ಕೃಷಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಂತರಾವ್ ತಿಳಿಸಿದರು.

ಹಳ್ಳಿಕಾರ್ ತಳಿಯ ರಾಸು ಬಳಸಿ, ಯಾವುದೇ ರಾಸಾಯನಿಕ ಕ್ರಮಗಳಿಲ್ಲದೇ ನೈಸರ್ಗಿಕವಾಗಿ ಕೃಷಿ ಮಾಡುವ ವಿಧಾನವನ್ನು ತಿಳಿಸಲು ಮನೆಗೊಂದು ಹಳ್ಳಿಕಾರ್ ಹಸು, ಊರಿಗೊಂಡು ಹಳ್ಳಿಕಾರ್ ಹೋರಿ ಘೋಷವಾಕ್ಯದೊಂದಿಗೆ ಕಾರ್ಯಾಗಾರ ಆಯೋಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಾಗಾರವು ಪ್ರತಿದಿನ ಬೆಳಗ್ಗೆ 8.30ರಿಂದ ರಾತ್ರಿ 7.30ರವರೆಗೆ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮಿ ಸಾನಿಧ್ಯದಲ್ಲಿ ಕಾರ್ಯಾಗಾರ ನಡೆಯಲಿದೆ. ಡಾ.ಸುಭಾಷ್ ಪಾಳೇಕರ್ ಅವರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಊಟ, ವಸತಿಗೆ 500 ರೂಗಳ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ರೈತರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಉಪಾಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್, ಸದಸ್ಯರಾದ ಚಂದ್ರಶೇಖರ್, ವೆಂಕಟೇಶ್, ಸೋಮಶೇಖರ್, ಮಂಜು, ಜಗದೀಶ್, ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net