

ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ, ಕಳೆದೊಂದು ವಾರದಿಂದ ಧಗಧಗಿಸುತಿದ್ದ ಧರಣಿ ತಂಪಾಯಿತು. ಸುಡುಬಿಸಿಲಿನ ತಾಪಮಾನಕ್ಕೆ, ಜನರು ಬಸವಳಿದಿದ್ದರು. ಉತ್ತಮ ಮಳೆಯಿಂದ ಗ್ರಾಮೀಣ ಪ್ರದೇಶದ ಹೊಲಗದ್ದೆಗಳಲ್ಲಿ ಅಲ್ಲಲ್ಲಿ ನೀರು ನಿಂತಿದ್ದು ಕಂಡುಬಂದಿತು. ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವ ವರದಿಯಾಗಿದ್ದು, ಯಾವುದೇ ನಷ್ಟವಾಗಿಲ್ಲ ಎಂದು ತಹಸೀಲ್ದಾರ್ ಆರ್.ಕವಿತಾ ಮಾಹಿತಿ ನೀಡಿದರು. ಹ.ಬೊ.ಹಳ್ಳಿ-52.2 ಮೀ.ಮೀ, ತಂಬ್ರಹಳ್ಳಿ-4.2, ಹಂಪಸಾಗರ -20.4 ಹಾಗೂ ಮಾಲವಿ-56.8 ಮೀ.ಮೀ.ನಷ್ಟು ಮಳೆಯಾಗಿದೆ.