ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಸಂಪೂರ್ಣ ಬೆಂಬಲ

Full support to Basavajaya Mrityunjaya Swamiji
ಇಳಕಲ್ಲದ ಕಡಪಟ್ಟಿ ಾರ್ಮ ಹೌಸದಲ್ಲಿ ಅವಳಿ ತಾಲೂಕಿನ ಪಂಚಮಸಾಲಿ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಬಸವರಾಜ ಕಡಪಟ್ಟಿ, ಅರವಿಂದ ಮಂಗಳೂರ, ರಾಜಕುಮಾರ ಬಾದವಾಡಗಿ, ಡಾ ಮಹಾಂತೇಶ ಕಡಪಟ್ಟಿ, ಶಿವಪ್ರಸಾದ ಗದ್ದಿ, ವಿಜಯ ಪಾಟೀಲ, ಅಜ್ಜನಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ಇಳಕಲ್ಲ(ಗ್ರಾ): ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಪಂಚಮಸಾಲಿ ಮುಖಂಡ ಬಸವರಾಜ ಕಡಪಟ್ಟಿ ತಿಳಿಸಿದ್ದಾರೆ.

ಇಲ್ಲಿನ ಕಡಪಟ್ಟಿ ಾರ್ಮ ಹೌಸ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಹೆಸರು ಮಾಡಿರುವ ಪಂಚಮಸಾಲಿ ಸಮಾಜ ಯಾವುದೇ ಕಾರಣಕ್ಕೂ ಒಡೆಯಬಾರದು. ಅದು ಬಲಿಷ್ಠವಾಗಿ ಬೆಳೆಯಲು ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಸಾಕಷ್ಟು ಹೋರಾಟದ ಜತೆಗೆ ಸಂಘಟನೆ ಮಾಡಿದ್ದಾರೆ. ತಮ್ಮ ನಿಲುವುಗಳನ್ನು ಮುಖ್ಯಮಂತ್ರಿ , ಪ್ರಧಾನಮಂತ್ರಿಗಳ ಮುಂದೆ ಪ್ರಭಾವಯುತವಾಗಿ ಮಂಡಿಸುವ ಸಾಮರ್ಥ್ಯವಿರುವ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯಾವುದೇ ಅನ್ಯಾಯವಾಗಬಾರದು ಎಂದು ಹೋರಾಟ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದರು.

ಹುಬ್ಬಳ್ಳಿಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ದೃಷ್ಟಿಯಿಂದ ಈ ಸುದ್ದಿಗೋಷ್ಠಿ ನಡೆಸಲಾಗಿದ್ದು, ರಾಜ್ಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಪಂಚಮಸಾಲಿ ಸಮಾಜ ಇನ್ನೂ ಗಟ್ಟಿಯಾಗಿ ಬೆಳೆಯಲಿ ಅದು ಒಡೆಯಬಾರದು ಎಂಬುದು ನಮ್ಮ ಸ್ಪಷ್ಟ ನಿರ್ಧಾರವಾಗಿದೆ. ಎ 19 ಮತ್ತು 20 ರಂದು ನಡೆಯಬೇಕಾಗಿದ್ದ ಎರಡು ಪ್ರತ್ಯೇಕ ಸಭೆಗಳನ್ನು ಮುಂದೂಡಲಾಗಿದೆ ಎಂದು ಸಮಾಜದ ಮುಖಂಡರು ಹೇಳಿದ ಕಾರಣ ಈ ಗೋಷ್ಠಿಯ ಮೂಲಕ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ನೈತಿಕ ಬೆಂಬಲ ಕೊಡುವ ಜತೆಗೆ ನಿಮ್ಮೊಡನೆ ಸದಾಕಾಲವೂ ನಾವು ಇದ್ದೇವೆ ಎಂದು ಅರವಿಂದ ಮಂಗಳೂರ, ರಾಜಕುಮಾರ ಬಾದವಾಡಗಿ, ಡಾ ಮಹಾಂತೇಶ ಕಡಪಟ್ಟಿ, ಶಿವಪ್ರಸಾದ ಗದ್ದಿ, ವಿಜಯ ಪಾಟೀಲ, ಅಜ್ಜನಗೌಡ ಪಾಟೀಲ ಮತ್ತಿತರರು ತಿಳಿಸಿದ್ದಾರೆ.

ಶಿವಣ್ಣ ಗೊಂದಿ, ವಿರೇಶ ಹುಲ್ಲಳ್ಳಿ ಡಾ ಮಲ್ಲಿಕಾರ್ಜುನ ಗಡಿಯಣ್ಣನವರ, ನಾಗಪ್ಪ ಕಡಪಟ್ಟಿ,ರಾಜುಗೌಡ ನಾಡಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net