ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆ

Full preparation for the fruit and flower show
Published on

ಮಡಿಕೇರಿ:

ಜಿಲ್ಲೆಯ ಪ್ರಮುಖ ಆಕ?ರ್ಣೆ ಮಡಿಕೇರಿ ರಾಜಾಸೀಟ್‌ನಲ್ಲಿ ಫಲಪು?್ಪ ಪ್ರದರ್ಶನಕ್ಕೆ ಭರದ ಸಿದ್ಧತೆ ನಡೆದಿದೆ. ಕೊಡಗಿನ ಮಳೆ ದೇವರು ಎನ್ನುವ ನಂಬಿಕೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಮಾದರಿ ಈ ಬಾರಿಯ ಪ್ರದರ್ಶನದ ವಿಶೇ?ವಾಗಿದೆ. ಇದನ್ನು ಹೊರತುಪಡಿಸಿ ಇಕೆಬಾನ ಸೇರಿದಂತೆ ವಿವಿಧ ರೀತಿಯ ಹೂವುಗಳ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ.

ಕೊಡಗಿನವರು ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಯ ಆಸಕ್ತರೂ ಕುತೂಹಲದಿಂದ ಎದುರು ನೋಡುವ ಮಡಿಕೇರಿ ರಾಜಾಸೀಟ್ ಫಲ ಪು?್ಪ ಪ್ರದರ್ಶನ ಈ ವ?ರ್ ಜ. ೨೬ರಿಂದ ೩ ದಿನಗಳ ಕಾಲ ನಡೆಯಲಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆದ ರಾಜಸೀಟು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಫಲ ಪು?್ಪ ಪ್ರದರ್ಶನಕ್ಕೆ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನಲ್ಲಿ ಸಿದ್ಧತೆಗಳು ಶುರುವಾಗಿದೆ. ಪ್ರತಿ ವ?ರ್ದಂತೆ ಈ ಬಾರಿಯೂ ಹಲವು ವಿಶೇ?ತೆಗಳೊಂದಿಗೆ ಫಲಪು?್ಪ ಪ್ರದರ್ಶನ ನಡೆಸಲು ತಯಾರಿ ನಡೆಸಲಾಗುತ್ತಿದೆ.
ರಾಜಾಸೀಟ್ ಉದ್ಯಾನದಲ್ಲಿ ಈಗಾಗಲೇ ಇರುವ ಹೂವಿನ ಗಿಡಗಳಲ್ಲಿ ಹೂವು ಅರಳಲು ಆರಂಭವಾಗಿದೆ. ಇದರ ಜತೆಗೆ ಸುಮಾರು ೧೨ ಸಾವಿರ ವಿವಿಧ ಮಾದರಿಯ ಹೂವಿನ ಕುಂಡಗಳನ್ನೂ ಪ್ರದರ್ಶನಕ್ಕೆ ಇಡಲಾಗುವುದು. ಉದ್ಯಾನದ ಸುತ್ತಲಿನ ಕಾಂಪೌಂಡ್‌ಗೆ ಸುಣ್ಣ ಬಣ್ಣ ಬಳಿಯಲಾಗುತ್ತಿದ್ದು, ರಾಜಾಸೀಟ್‌ನ ಸೌಂದರ್ಯ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೋಟಗಾರಿಕೆ ಇಲಾಖೆಯಿಂದ ತೆಗೆದುಕೊಳ್ಳಲಾಗಿದೆ.

ರಾಜಾಸೀಟ್ ವೀಕ್ಷಣಾ ಸ್ಥಳದ ಸುತ್ತಮುತ್ತಲಿನ ಜಾಗದಲ್ಲಿ ಹೂವಿನ ಗಿಡಗಳ ಪಾತಿಯಲ್ಲಿ ಕೂಡ ಈಗ ಹೂವು ಬಿಡಲಾರಂಭಿಸಿದೆ. ಇಲ್ಲಿ ಅಡ್ಡಾದಿಡ್ಡಿ ಬೆಳೆದಿರುವ ಗಿಡಗಳನ್ನು ಇಲ್ಲಿಯ ಸಿಬ್ಬಂದಿ ಕತ್ತರಿಸಿ ಒಪ್ಪ ಓರಣಗೊಳಿಸುವ ಕೆಲಸ ನಡೆಯುತ್ತಿದೆ. ವ?ರ್ದಿಂದ ವ?ರ್ಕ್ಕೆ ಜನಾಕ?ರ್ಣೆ ಹೆಚ್ಚಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಫಲಪು?್ಪ ಪ್ರದರ್ಶನ ಈ ಬಾರಿ ಮತ್ತ?್ಟು ಸುಂದರವಾಗಿಸಲು ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೋಟಗಾರಿಕೆ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಪ್ರತಿ ವ?ರ್ವೂ ಫಲ ಪು?್ಪ ಪ್ರದರ್ಶನದಲ್ಲಿ ಒಂದೊಂದು ವಿಶೇ? ಆಕ?ರ್ಣೆ ಇರುತ್ತದೆ. ಚುನಾವಣಾ ವ?ರ್ ಆದ ಕಾರಣ ಕಳೆದ ವ?ರ್ ಮತದಾನದ ಕುರಿತು ಜಾಗೃತಿ ಮೂಡಿಸಲು ಈ ಪ್ರದರ್ಶನ ಬಳಸಿಕೊಳ್ಳಲಾಗಿತ್ತು. ಇವಿಎಂ, ವಿವಿಪ್ಯಾಟ್ ಯಂತ್ರಗಳ ಮಾದರಿಯನ್ನು ಹೂವುಗಳನ್ನು ಬಳಸಿ ನಿರ್ಮಿಸಲಾಗಿತ್ತು. ಮತದಾನ ಜಾಗೃತಿ ಮೂಡಿಸುವ ಸೆಲ್ಫಿ ಪಾಯಿಂಟ್ ಕೂಡ ಗಮನ ಸೆಳೆಯುವಂತೆ ಇತ್ತು. ನಾಲ್ಕು ನಾಡು ಅರಮನೆಯೂ ದೊಡ್ಡ ಸಂಖ್ಯೆಯಲ್ಲಿ ಆಸಕ್ತರನ್ನು ಸೆಳೆದಿತ್ತು.

ಈ ವ?ರ್ ಕೊಡಗಿನ ಮಳೆ ದೇವರು ಪಾಡಿಯ ಶ್ರೀ ಇಗ್ಗುತಪ್ಪ ದೇವಾಲಯದ ಮಾದರಿಯನ್ನು ಹೂವುಗಳಿಂದ ನಿರ್ಮಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಫಲಪು?್ಪ ಪ್ರದರ್ಶನ ಸಂದರ್ಭದಲ್ಲಿ ಮಕ್ಕಳನ್ನು ಸೆಳೆಯಲು ಕೂಡ ಚಿಂತನೆ ನಡೆದಿದೆ. ಕಳೆದ ವ?ರ್ದಂತೆ ಈ ವ?ರ್ವೂ ವಿವಿಧ ಕಾರ್ಟೂನ್, ಮಕ್ಕಳು ಇ?್ಟಪಡುವ ಪ್ರಾಣಿ, ಪಕ್ಷಿಗಳ ಮಾದರಿಯನ್ನೂ ಹೂವಿನಿಂದಲೇ ತಯಾರಿಸಿ ಪ್ರದರ್ಶನಕ್ಕೆ ಇಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಫಲ-ಪು?್ಪ ಪ್ರದರ್ಶನ ಹೆಚ್ಚು ಆಕ?ರ್ಣೀಯಗೊಳಿಸಲು ಜಿಲ್ಕಾಧಿಕಾರಿ ವೆಂಕಟ್ ರಾಜಾ ತುಂಬಾ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ನಡೆದಿರುವ ರಾಜಸೀಟು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಸಂಬಂಧ ವಿಸ್ತೃತ ಚರ್ಚೆ ನಡೆದಿದ್ದು ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಹಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಫಲ-ಪು?್ಪ ಪ್ರದರ್ಶನಕ್ಕೆ ತಯಾರಿಗಳನ್ನು ನಡೆಸಲಾಗುತ್ತಿದೆ.
ಪ್ರದರ್ಶನದ ವೇಳೆ ವಿವಿಧ ಮಳಿಗೆಗಳನ್ನು ತೆರೆಯಲು ಕೂಡ ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ಹೂವಿನ ಗಿಡ, ಬೀಜ, ಕುಂಡಗಳ ಮಾರಾಟ, ವಿವಿಧ ಬಗೆಯ ಅಲಂಕಾರಿಕಾ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಉಪಕರಣಗಳು, ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಫುಡ್ ಕೋರ್ಟ್ ಕೂಡ ತೆರೆಯುವ ಬಗ್ಗೆ ಚರ್ಚೆ ನಡೆದಿದೆ.

ಕಳೆದ ವ?ರ್ ಜೇನು ಮೇಳ, ಕಾಫಿ ಮೇಳ, ವೈನ್ ಮೇಳಗಳನ್ನು ಪ್ರತ್ಯೇಕವಾಗಿ ನಡೆಸಲಾಗಿತ್ತು. ಇವು ದೊಡ್ಡ ಮಟ್ಟಿನ ಯಶಸ್ಸನ್ನೂ ಕಂಡಿದ್ದವು. ಈ ಬಾರಿ ಈ ಮೇಳಗಳನ್ನು ಫಲ-ಪು?್ಪ ಮೇಳದೊಂದಿಗೆ ಜೋಡಿಸುವ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕ ಬಂದರೆ ಫಲ-ಪು?್ಪ ಪ್ರದರ್ಶನ ಮತ್ತ?್ಟು ಕಳೆಗಟ್ಟಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರವಾಸಿಗರಿಗೆ ಕೊಡಗಿನ ಸಂಸ್ಕೃತಿ, ಪದ್ಧತಿ, ಪರಂಪರೆ ತಿಳಿಸುವುದರ ಜತೆಗೆ ಇಲ್ಲಿಯ ಸಾಂಪ್ರದಾಯಿಕ ತಯಾರಿಕೆಗಳು, ಕೃಷಿ ಉತ್ಪನ್ನಗಳನ್ನು ಪ್ರವಾಸಿಗರಿಗರಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜಾಸೀಟ್ ಪಕ್ಕದಲ್ಲೇ ನಿರ್ಮಿಸಲಾಗಿರುವ ಕೂರ್ಗ್ ವಿಲೇಜ್ ಕೂಡ ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೆರೆದುಕೊಳ್ಳುವ ನಿರೀಕ್ಷೆ ಇದೆ. ಆದರೆ ಈ ಸಂಬಂಧ ಅಧಿಕಾರಿಗಳಿಂದ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲವಾದರೂ ಇಲ್ಲಿಯೂ ಜೋರಾದ ತಯಾರಿ ನಡೆದಿದೆ.

ಪ್ರವೇಶ ದ್ವಾರಕ್ಕೆ ಬಣ್ಣ ಬಳಿದು ಅಲಂಕಾರ ಮಾಡಲಾಗಿದ್ದು, ಕೂರ್ಗ್ ವಿಲೇಜ್ ಒಳಗೆ ಇರುವ ಮಳಿಗೆಗಳನ್ನೂ ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಯಲಾಗುತ್ತಿದೆ. ಪುಟ್ಟ ಕೊಳದ ನಿರ್ವಹಣೆಯನ್ನೂ ಮಾಡಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದ ಸಂದರ್ಭದಲ್ಲೇ ಕೂರ್ಗ್ ವಿಲೇಜ್ ಕೂಡ ಆರಂಭವಾದರೆ ಪ್ರದರ್ಶನದ ಆಕರ್ಷಣೆ ಹೆಚ್ಚಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಭೇಟಿ ನೀಡುವ ಪ್ರತಿ ಪ್ರವಾಸಿಗರೂ ರಾಜಾಸೀಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ರಾಜಾಸೀಟು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ಮತ್ತಿತರ ಸಂಬಂಧ ವಿಶೇ? ಗಮನಹರಿಸಲು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ರಾಜಾಸೀಟ್ ಉದ್ಯಾನವನದ ಫೌಂಟೇನ್ ಉತ್ತಮವಾಗಿ ನಿರ್ವಹಣೆ ಮಾಡುವಂತೆಯೂ ಸೂಚಿಸಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ಪ್ರತಿ ವ?ರ್ದಂತೆ ಈ ಬಾರಿಯೂ ಫಲಪು?್ಪ ಆಕ?ರ್ಣೀಯವಾಗಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಕೊಡಗು ಜಿಲ್ಲೆಯ ಕಲೆ, ಸಂಸ್ಕೃತಿ, ಪರಿಸರ ಮತ್ತಿತರ ವಿ?ಯಗಳ ಕುರಿತು ಹಲವು ಮಾಹಿತಿ ನೀಡುವ ಪ್ರಯತ್ನವನ್ನೂ ಮಾಡಲಾಗುವುದು. ವಿವಿಧ ಅಂಗಡಿ ಮಳಿಗೆಗಳನ್ನೂ ತೆರೆಯಲಾಗುವುದು. ಪಾಡಿ ಇಗ್ಗುತ್ತಪ್ಪ ದೇವಾಲಯದ ಪ್ರತಿಕೃತಿ ಈ ಬಾರಿಯ ವಿಶೇ?ವಾಗಿದೆ.
ಎಚ್.ಆರ್. ಯೋಗೇಶ್, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net