ಹುಣ್ಣಿಮೆ ಬೆಳಕು ಕಾರ್ಯಕ್ರಮ

15IND2 (1)
ಇಂಡಿ ಪಟ್ಟಣದಲ್ಲಿ ನಡೆದ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಿ.ಎಸ್.ಪಾಟೀಲ, ಪ್ರಕಾಶ ಹೊಳಿನ, ಮಲ್ಲಿಕಾರ್ಜುನ ಟೆಂಗಳೆ ಅವರನ್ನು ಸತ್ಸಂಗ ಸಮಿತಿಯಿಂದ ಸನ್ಮಾನಿಸಲಾಯಿತು. ಪ್ರೊ.ಎಂ.ಜೆ.ಪಾಟೀಲ, ನಿವೃತ್ತ ಶಿಕ್ಷಕ ಸಿ.ಎಂ.ಉಪ್ಪಿನ, ಕುಲಪ್ಪ ದಂಡಾವತಿ ಇತರರಿದ್ದರು.
Published on

ಇಂಡಿ: ಪಟ್ಟಣದ ಬಸವರಾಜೇಂದ್ರ ಸತ್ಸಂಗ ಸಮಿತಿ, ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ಸಹಯೋಗದಲ್ಲಿ ಬುಧವಾರ 63ನೇ ಹುಣ್ಣಿಮೆ ಬೆಳಕು ಕಾರ್ಯಕ್ರಮ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಿ.ಎಸ್.ಪಾಟೀಲ, ಪ್ರಕಾಶ ಹೊಳಿನ, ಮಲ್ಲಿಕಾರ್ಜುನ ಟೆಂಗಳೆ ಅವರನ್ನು ಸತ್ಸಂಗ ಸಮಿತಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜೆ.ಪಾಟೀಲ ಸನ್ಮಾನಿಸಿದರು. ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಚ್.ಎಸ್.ಎಳೆಗಾಂವ ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕ ಸಿ.ಎಂ.ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ದಳವಾಯಿ, ಸತ್ಸಂಗ ಸಮಿತಿ ಅಧ್ಯಕ್ಷ ಪ್ರೊ.ಐ.ಬಿ.ಸುರಪುರ, ಎನ್.ಟಿ.ಸಂಗಾ, ನಿವೃತ್ತ ತಹಸೀಲ್ದಾರ್ ಪಟ್ಟದಕಲ್ಲ, ಎಸ್.ವಿ.ಹೂಗಾರ, ಕುಲಪ್ಪ ದಂಡಾವತಿ ಇದ್ದರು.

ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ ಪ್ರಾರ್ಥಿಸಿದರು. ಎಸ್.ಎಸ್.ಹಿರಣಿಕೇರಿ ನಿರೂಪಿಸಿದರು. ಕೆ.ಜಿ.ನಾಟೀಕಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net