ಲಚ್ಯಾಣದಲ್ಲಿ ಕಾರ ಹುಣ್ಣಿಮೆ ಸಂಭ್ರಮ

Kara full moon celebration in Lachyana
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ತ್ತ ಹಮ್ಮಿಕೊಂಡ ಸ್ಪರ್ಧೆಯಲ್ಲಿ ಯುವಕರು ಭಾರವಾದ ಕಲ್ಲು ಎತ್ತಿ ಬಲ ಪ್ರದರ್ಶಿಸಿದರು.
Published on

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಡಗರದಿಂದ ಆಚರಿಸಲಾಯಿತು.

ಗ್ರಾಮದಲ್ಲಿ ಎತ್ತುಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಗ್ರಾಮದ ರೈತರು ಶೃಂಗರಿಸಿದ ಎತ್ತುಗಳನ್ನು ಬಂಡಿಗೆ ಹೂಡಿ ನಾ ಮುಂದು ತಾ ಮುಂದು ಎಂದು ಬಂಡಿ ಓಡಿಸಿ ನೋಡುಗರ ಮನರಂಜಿಸಿದರು.

ಈ ಸ್ಪರ್ಧೆಯಲ್ಲಿ ಗ್ರಾಮದ ರೈತರಾದ ಶರಣಪ್ಪ ಲಾಳಸೇರಿ, ಸಂಕಪ್ಪಗೌಡ ಬಿರಾದಾರ ಅವರ ಮನೆತನದ ಎತ್ತುಗಳು ವಿಜೇತರಾಗಿ ಬಹುಮಾನ ಪಡೆದವು.

ಬಳಿಕ ಊರ ಅಗಸಿ ಬಳಿ ಭಾರ ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಯುವಕರು, ರೈತರು ಭಾರವಾದ ಕಲ್ಲು ಎತ್ತಿ ಬಲ ಪ್ರದರ್ಶಿಸಿದರು.

ತಾಲೂಕಿನ ಲೋಣಿ ಕೆ.ಡಿ. ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮದಲ್ಲಿ ಎತ್ತುಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.

ಬಳಿಕ ಶ್ರೀಭೈರಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸ್ಥಳಿಯ ಯುವಕರಾದ ವಿಕಾಸ ಬನಸೋಡೆ, ಸುಂದರಕುಮಾರ ಬನಸೋಡೆ ಹಾಗೂ ಇನ್ನಿತರ ಯುವಕರು ಭಾರವಾದ ಕಲ್ಲು ಎತ್ತಿ ಬಲ ಪ್ರದರ್ಶಿಸಿ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net