

ಹೊಸಪೇಟೆ: ಕ್ಷೇತ್ರಪತಿ ಕೃಷಿ, ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಚಿತ್ರವಾಗಿದ್ದು, ಉತ್ತರ ಕರ್ನಾಟಕದ ಜನರ ಜೀವನದ ಪ್ರತಿಬಿಂಬಿಸುತ್ತದೆ. ಹೀಗಾಗಿ ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಚಿತ್ರದ ನಟ ನವೀನ್ ಶಂಕರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಫರ್ಟ್ ಸರಿಯಾಗಿದ್ದರೆ, ನಿಶ್ಚಿತವಾಗಿ ಯಶಸ್ಸು ದೊರೆಯುತ್ತದೆ. ಈಗ ಅಂತಹ ಸಕ್ಸಸ್ ಹಾದಿ ಹಿಡಿದು ಹೊರಟಿದ್ದಾನೆ. ಕ್ಷೇತ್ರಪತಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕ ರೈತರ ಬದುಕು, ಅನ್ನದಾತನ ಸಮಸ್ಯೆಗಳು, ಹೋರಾಟದ ಕತೆಯನ್ನ ಪವರ್‌ಫುಲ್ ಆಗಿ ತೆರೆ ಮೇಲೆ ತರಲಾಗಿದೆ. ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೊತ್ತ ಸಿನಿಮಾ ಬಂದಿದೆ. ಕ್ರೇತ್ರಪತಿಗೆ ಪ್ರೇಕ್ಷಕ ಪ್ರಭುಗಳು ಒಳ್ಳೆಯ ಮಾರ್ಕ್ಸ್ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ಕೂಡ ರೈತನ ಮಗನಾಗಿದ್ದು, ರೈತರ ಪರ ಹೋರಾಟಕ್ಕೆ ಇಳಿಯುತ್ತಾನೆ. ಅದು ಯಾಕೆ ಅನ್ನೋದೆ ಈ ಸಿನಿಮಾದಲ್ಲಿ ಇಂಟ್ರೆಸ್ಟಿAಗ್ ಆಗಿ ಕಟ್ಟಿಕೊಟ್ಟಿದ್ದಾರೆ ಎಂದರು.
ಅದಕ್ಕೂ ಮುನ್ನ ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಮೀರ್‌ಆಲಂ ಚಿತ್ರಮಂದಿರಕ್ಕೆ ಭೇಟಿ ನೀಡಿ, ವೀಕ್ಷಕರ ಅಭಿಪ್ರಯ ಪಡೆದರು.
ಚಿತ್ರದ ನಿರ್ದೇಶಕ ಶ್ರೀಕಾಂತ್ ಕಟಗಿ, ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ ಮತ್ತಿತರರು ಇದ್ದರು.