ಗುತ್ತಲದಲ್ಲಿ ಪೂರ್ಣ ಕುಂಭೋತ್ಸವ

Hemagiri muth
Published on

ಗುತ್ತಲ: ಪಟ್ಟಣದ ಐತಿಹಾಸಿಕ ಶ್ರೀಹೇಮಗಿರಿಮಠದಲ್ಲಿ ಸುಮಂಗಲೆಯರ ಹಾಗೂ ಮುತ್ತೈದೆಯರ ಪೂರ್ಣ ಕುಂಭೋತ್ಸವದ ಮೆರವಣಿಗೆ ಸೋಮವಾರ ಬೆಳಗ್ಗೆ 8ಕ್ಕೆ ಜರುಗುವುದು.

ಬೆಳಗ್ಗೆ ಶ್ರೀಮಠದಿಂದ ಆರಂಭವಾಗುವ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಸಂಪ್ರದಾಯ ವಾದ್ಯಗಳೊಂದಿಗೆ ನೆರವೇರುವುದು. ಮಧ್ಯಾಹ್ನ ಮರಳಿ ಶ್ರೀಮಠಕ್ಕೆ ಬಂದು ಮೆರವಣಿಗೆ ಸಂಪನ್ನವಾಗುವುದು. ನಂತರ ಅನ್ನಸಂತರ್ಪಣೆ ಜರುಗುವುದೆಂದು ಪ್ರಕಟಣೆ ತಿಳಿಸಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net