

ಅರಸೀಕೆರೆ: ನಗರದ ವಿವಿಧ ಬಡಾವಣೆಗಳಲ್ಲಿರುವ ಶಿವ ದೇಗುಲಗಳಲ್ಲಿ ಬುಧವಾರ ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು.
ಹುಳಿಯಾರು ರಸ್ತೆಗೆ ಹೊಂದಿಕೊಂಡಂತಿರುವ ಶ್ರೀ ಚಂದ್ರಮೌಳೀಶ್ವರ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಸರ್ವಾಲಂಕೃತ ಶಿವಲಿಂಗದ ದರ್ಶನ ಪಡೆದರು. ಮಳೆ ಮಲ್ಲೇಶ್ವರ ಸ್ವಾಮಿ, ವಾಚನಾಲಯ ರಸ್ತೆಯ ಶ್ರೀ ಭವಾನಿ ಶಂಕರ, ಕೆಂಗಲ್ ಸಿದ್ದೇಶ್ವರ ದೇಗುಲಗಳಿಗೆ ತೆರಳಿ ವಸ್ತ್ರ, ಹೂ, ಹಣ್ಣು ಅರ್ಪಿಸಿ ಪ್ರಸಾದ ಸ್ವೀಕರಿಸಿದರು.
ತಾಲೂಕಿನ ಸುಕ್ಷೇತ್ರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಿಳೆಯರು ಪೂರ್ಣ ಕುಂಭ ಸೇವೆ ನೆರವೇರಿಸಿದರು. ಹಾರನಹಳ್ಳಿ, ಹುಲ್ಲೇಕೆರೆ, ಜಾವಗಲ್, ಶಾನೆಗೆರೆ ಸೇರಿದಂತೆ ಎಲ್ಲ ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.