ಶಿಗ್ಲಿ ಗ್ರಾಮಸ್ಥರ ಬೇಡಿಕೆ ಈಡೇರಿಕೆ

Shigli
Published on

ಶಿಗ್ಲಿ: ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡಿದ್ದು, ಸುತ್ತಲಿನ ಸುಮಾರು 15 ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.

ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ 8ನೇ ತರಗತಿ ಪ್ರಾರಂಭೋತ್ಸವ ಹಾಗೂ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮವು ಶಿಕ್ಷಣ ಕಾಶಿ ಎಂದು ಹೆಸರಾಗಿದೆ. ಶಾಲೆಯಲ್ಲಿ 8ನೇ ತರಗತಿ ಪ್ರಾರಂಭವಾಗಿದೆ, 9ನೇ ಹಾಗೂ 10ನೇ ತರಗತಿಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಇದರಿಂದಾಗಿ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅಬಿವೃದ್ಧಿಗಾಗಿ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಕ್ಷೇತ್ರ ಶೀಕ್ಷಣಾಧಿಕಾರಿ ಎಚ್.ಎಂ. ನಾಯಕ್, ಗ್ರಾಮ ಪಂಚಾಯತಿ ಅಧ್ಯಕ್ಷೆ ದುಂಡವ್ವ ಹಾದಿಮನಿ, ಉಪಾಧ್ಯಕ್ಷೆ ಶೈಲಾ ಜನಿವಾರದ, ಎಸ್​ಡಿಎಂಸಿ ಅಧ್ಯಕ್ಷ ಶಂಭುಲಿಂಗ ಕಟ್ಟಿಮನಿ, ಮುಖ್ಯೋಪಾಧ್ಯಾಯಿನಿ ಎನ್.ವಿ. ಕುಲಕರ್ಣಿ, ಕ್ಷೇತ್ರ ಅಕ್ಷರದಾಸೊಹ ಅಧಿಕಾರಿ ಎಚ್. ಎಸ್. ರಾಮನಗೌಡ್ರ, ಡಿ.ಎಚ್. ಪಾಟೀಲ, ಸಿಆರ್​ಪಿ ಜ್ಯೋತಿ ಗಾಯಕ್ವಾಡ, ಯಲ್ಲಪ್ಪ ತಳವಾರ, ಸಂತೋಷ ತಾಂದಳೆ, ಮುದಕಪ್ಪ ಗಾಡದ, ಸಂಜೀವ ದೇಸಾಯಿ, ಕೃಷ್ಣಾ ಬಿದರಳ್ಳಿ, ರೇಣುಕಾ ಆತಡಕರ, ರೇಣುಕಾ ತಳವಾರ, ನೂಪೂರ ಕರ್ಜಿಗಿ, ಆದೇಶ ಹೂಲಗೂರ, ವಿರುಪಾಕ್ಷಪ್ಪ ಶಿರಹಟ್ಟಿ, ಬಸವರಾಜ ಯತ್ನಳ್ಳಿ, ಗೀತಾ ಹಳ್ಯಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net