ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸಿ

h18-mudhol
Published on

ಹುಬ್ಬಳ್ಳಿ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಉತ್ತರ ಕರ್ನಾಟಕ ದಿ.ಎ.ಜೆ. ಮುಧೋಳ ಅಭಿಮಾನಿಗಳ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಧಾರವಾಡ ಜಿಲ್ಲಾ ಎಐಟಿಯುಸಿ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಕಾರ್ಮಿಕರ ಕಚೇರಿಯಿಂದ ಪ್ರತಿಯೊಂದು ಮಾಹಿತಿ ಲಭ್ಯವಾಗಬೇಕು. ಕಾರ್ಮಿಕರ ಮಕ್ಕಳಿಗೆ ಶಿಷ್ಯ ವೇತನ ನೀಡಬೇಕು. ಲೇಬರ್ ಕಾರ್ಡ್ ವಿತರಿಸಬೇಕು. ಕಾರ್ಮಿಕರ ಕಿಟ್ ಕೊಡಬೇಕು. ಮದುವೆ ಮತ್ತು ಮರಣದ ಪರಿಹಾರ ಶೀಘ್ರವೇ ವಿತರಿಸಬೇಕು ಸೇರಿದಂತೆ ಒಟ್ಟು 10 ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
ಕಾರ್ಮಿಕ ಮುಖಂಡರಾದ ಬಾಬಾಜಾನ್ ಮುಧೋಳ, ಹಸನಬಾಸ್ ಜುಂಗೂರ, ಬಿ.ಎ. ಮುಧೋಳ, ಖಾಜಾ ಬೇಸ್ತಿ, ಗೌಸ್ ಗಾಳಿ, ಬಾಷಾ ಟಾಕಿವಾಲೆ, ಪೀರಸಾಬ್ ನದಾಫ್, ಎನ್.ಎ. ಇನಾಂದಾರ, ಶಹೀದ್ ಕಮಡೊಳ್ಳಿ, ರಮೇಶ ಬೋಸ್ಲೆ, ಕಾಸಿಂಸಾಬ್ ಹನುಮಸಾಗರ, ಯುಸೂಫ್ ಬಳ್ಳಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net