

ಕಡೂರು: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಭಾರತೀಯ ಮಜ್ದೂರ್ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಬಿ.ಸಿ.ಶಿವಮ್ಮ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಮೂಲಭೂತ ಸೌಕರ್ಯ ನೀಡಲು ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ನಮ್ಮ ಬೇಡಿಕೆ ಪತ್ರ ಸಲ್ಲಿಸಿದ್ದು, ಮನವಿ ಸ್ವೀಕರಿಸಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕರ್ತೆಯರಿಗೆ 25 ಸಾವಿರ ಹಾಗೂ ಸಹಾಯಕಿಯರಿಗೆ 12 ಸಾವಿರ ಕನಿಷ್ಟ ವೇತನ, ಕಾರ್ಯಕರ್ತೆಯರನ್ನು ಸಿ, ಸಹಾಯಕಿಯರನ್ನು ಡಿ.ದರ್ಜೆ ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಉತ್ತಮ ಗುಣಮಟ್ಟದ ಸಮವಸ ಒದಗಿಸಬೇಕು. ಇತರೆ ಇಲಾಖೆಗಳ ಕೆಲಸದ ಜವಾಬ್ದಾರಿಯನ್ನು ಕಡಿತಗೊಳಿಸಬೇಕು. ಮೊಟ್ಟೆ, ತರಕಾರಿ ವೆಚ್ಚದ ಹಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಡೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಎಂ.ಕವಿತಾ, ತಾಲೂಕು ಉಪಾಧ್ಯಕ್ಷೆ ಪ್ರಮೀಳ, ರಾಜ್ಯ ಪದಾಧಿಕಾರಿ ಕೆ.ಪದ್ಮ, ಹೇಮಾವತಿ, ಇಂದ್ರಮ್ಮ ಮತ್ತಿತರರು ಇದ್ದರು.