ಮೇ 26ರ ಒಳಗೆ ನಮ್ಮ ಬೇಡಿಕೆ ಈಡೇರಿಸಿ

Fulfill our demand by May 26th.
ಹುನಗುಂದ ಪುರಸಭೆ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸುತ್ತಿದ್ದಾರೆ. ಉಪಾಧ್ಯಕ್ಷ ಶಾಮಸುಂದರ ತಳ್ಳಿಕೇರಿ, ದೇವಪ್ಪ ಹಗೇದಾಳ, ಹುಲಗಪ್ಪ ಚಲವಾದಿ, ಮುತ್ತಣ್ನ ಕಳ್ಳಿಗುಡ್ಡ, ಪಕೀರಪ್ಪ ಮರ್ಜಿ ಇದ್ದಾರೆ.
Published on

ಹುನಗಂದ: ರಾಜ್ಯ ಪರಿಷತ್ ಮಂಡಳಿ ಸೂಚಿಸಿದಂತೆ ಹಂತ ಹಂತವಾಗಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾವು ಪ್ರತಿದಿನ ಸೇವೆ ಸಲ್ಲಿಸುತ್ತ ಹೋರಾಟ ನಡೆಸುತ್ತೇವೆ. ಮೇ 26ರೊಳಗೆ ನಮ್ಮೆಲ್ಲ ಬೇಡಿಕೆಗಳು ಈಡೇರದಿದ್ದರೆ ಸ್ಥಳೀಯ ಸಂಸ್ಥೆಗಳಲ್ಲಿ ಲೇಖನಿ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಳ್ಳುತ್ತೇವೆ ಎಂದು ರಾಜ್ಯ ಪೌರ ಸೇವಾ ನೌಕರ ಸಂಘ ತಾಲೂಕ ಘಟಕದ ಅಧ್ಯಕ್ಷ ಮಹಾಂತೇಶ ತಾರಿವಾಳ ತಿಳಿಸಿದರು.

ಸ್ಥಳೀಯ ಪುರಸಭೆ ಸಿಬ್ಬಂದಿ ನಡೆಸುತ್ತಿರುವ ಅನಿರ್ದಿಷ್ಟಾವಧಿಯವರೆಗೆ ಬಲ ತೋಳಿಗೆ ಕಪ್ಪುಪಟ್ಟಿ ಧರಿಸಿ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉಪಾಧ್ಯಕ್ಷ ಶಾಮಸುಂದರ ತಳ್ಳಿಕೇರಿ, ದೇವಪ್ಪ ಹಗೇದಾಳ, ಹುಲಗಪ್ಪ ಚಲವಾದಿ, ಮುತ್ತಣ್ನ ಕಳ್ಳಿಗುಡ್ಡ, ಪಕೀರಪ್ಪ ಮರ್ಜಿ, ಮುತ್ತಣ್ಣ ಹುಣಶಾಳ, ಪರಸಪ್ಪ ನಡುವಿನಮನಿ, ವೆಂಕಟೇಶ ನಡುವಿನಮನಿ, ಯಲ್ಲವ್ವ ಕಂಬಳಿಹಾಳ, ರೇಣವ್ವ ಮರ್ಜಿ, ನಿರ್ಮಲವ್ವ ಹಿರೇಮನಿ, ರೇಣವ್ವ ಮಸ್ಕಿ, ಬಾಬು ಲೈನ್, ರತ್ನವ್ವ ಹಿರೇಮನಿ, ಹುಲಗವ್ವ ನಡುವಿನಮನಿ, ಹೇಮಾವತಿ ಮರ್ಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net