ಆರ್ಥಿಕ ನಷ್ಟದ ಬೇಡಿಕೆ ಈಡೇರಿಸಿ

ಸಿರಗುಪ್ಪ ತಹಸಿಲ್ ಕಚೇರಿ ಶಿರಸ್ತೇದಾರ್ ರಾಘವೇಂದ್ರಗೆ ರಾಜ್ಯ ನಿವೃತ್ತ ನೌಕರರ ವೇದಿಕೆ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ವೇದಿಕೆ ರಾಜ್ಯ ಸಂಚಾಲಕ ವಿ.ಹನುಮಂತಪ್ಪ, ತಾಲೂಕು ಸಂಚಾಲಕರಾದ ಬಸವರಾಜಯ್ಯ, ರಾಮಚಂದ್ರಪ್ಪ, ನಿವೃತ್ತ ನೌಕರರಾದ ಸೋಮನಗೌಡ, ಚನ್ನವೀರಯ್ಯ, ವಿ.ಮಲ್ಲಪ್ಪ, ಶಂಕ್ರಪ್ಪ, ಶರಣಪ್ಪ, ಭಗವಾನ್, ನಿಂಗಣ್ಣ ಇತರರಿದ್ದರು.

Published on

ಸಿರಗುಪ್ಪ: ಏಳನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅಗಿರುವ ಆರ್ಥಿಕ ನಷ್ಟದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲೂಕು ಸಮಿತಿಯಿಂದ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಗುರುವಾರ ತಹಸೀಲ್ದಾರ್‌ಗೆ ಸಲ್ಲಿಸಲಾಯಿತು.

ವೇದಿಕೆ ರಾಜ್ಯ ಸಂಚಾಲಕ ವಿ.ಹನುಮಂತಪ್ಪ ಮಾತನಾಡಿ, 2022ರ ಜು.01 ರಿಂದ 2024 ಜು.31 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವಾಗ ಆರ್ಥಿಕ ನಷ್ಟವಾಗಿದೆ. ಪ್ರಸ್ತುತ ಸೇವೆಯಲ್ಲಿರುವ ನೌಕರರಂತೆ ನಾವು ಕೂಡ 2022ರ ಜು.01ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ಬದಲಾಗಿ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಜತೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯಗಳ ವ್ಯತ್ಯಾಸದ ಮೊತ್ತ ಕೊಡಬೇಕು. ಇದರ ಜತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ತಾಲೂಕು ಸಂಚಾಲಕ ಬಸವರಾಜಯ್ಯ ಮಾತನಾಡಿ, ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net