ಗುರಿ ಸಾಧಿಸಲು ನಿರಂತರ ಪ್ರಯತ್ನ ಅಗತ್ಯ

Kampli DHS School
ಕಂಪ್ಲಿಯ ಡಿಎಚ್‌ಎಸ್ ಪಿಯೂ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವ, ಪ್ರವೇಶ ಕಾರ್ಯಕ್ರಮದಲ್ಲಿ ವಿಜಯ ಪ್ರೌಢಶಾಲೆ ಶಿಕ್ಷಕ ಜಿ.ಮೇಲಾರೆಡ್ಡಿ ಮಾತನಾಡಿದರು. ಜ್ಞಾನಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಸವರಾಜಸ್ವಾಮಿ, ಶಿಕ್ಷಕ ಡಾ.ಬಿ.ಸುನೀಲ್, ಆಡಳಿತಾಧಿಕಾರಿ ಡಾ.ಎಂ.ಸಂದೀಪಕುಮಾರ್, ಪ್ರಾಚಾರ್ಯೆ ಕಾಳಿ ಗಗನ ಇತರರಿದ್ದಾರೆ.
Published on

ಕಂಪ್ಲಿ: ಕಂಡ ಕನಸು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ಅಗತ್ಯ ಎಂದು ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ.ಬಿ.ಸುನೀಲ್ ಹೇಳಿದರು.

ಇಲ್ಲಿನ ಡಿಎಚ್‌ಎಸ್ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸಾಂಸ್ಕೃತಿಕ ಉತ್ಸವ ಮತ್ತು ಪ್ರವೇಶ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಹೆಚ್ಚು ಅಂಕಗಳಿಸುವ ಗುರಿಯೊಂದಿಗೆ ಉನ್ನತ ಶಿಕ್ಷಣ, ಹುದ್ದೆಗಳಿಸುವ ಗುರಿ ಹೊಂದಬೇಕು. ಮುಂದಿನ ಗುರಿ ತಲುಪಲು ವರ್ತಮಾನದ ಕ್ರಿಯಾಶೀಲತೆಯೊಂದಿಗೆ ಉತ್ತಮ ಕೌಶಲಗಳಿಕೆಯತ್ತ ಗಮನ ನೀಡುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಮೊಬೈಲ್‌ಯನ್ನು ಶಿಕ್ಷಣಕ್ಕೆ ಪರ್ಯಾಯವಾಗಿ ಬಳಸಿಕೊಂಡಲ್ಲಿ ಪರಿಣಾಮಕಾರಿ ಫಲಿತಾಂಶಗಳಿಸಲು ಸಾಧ್ಯವಿದೆ ಎಂದರು.

ಜ್ಞಾನಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಸವರಾಜಸ್ವಾಮಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರ ಜರುಗಿದವು. ಕಂಪ್ಲಿಯ ವಿಜಯ ಪ್ರೌಢಶಾಲೆ ಶಿಕ್ಷಕ ಜಿ.ಮೇಲಾರೆಡ್ಡಿ, ಜಾನಭಾರತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಂ.ಸಂದೀಪಕುಮಾರ್, ಪ್ರಾಚಾರ್ಯೆ ಕಾಳಿ ಗಗನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net