ತುಂಬಿಸಿ ಇಂಧನ, ಗೆಲ್ಲಿರಿ ಕಾರು

h4- IOC 1
Published on

ಹುಬ್ಬಳ್ಳಿ: ಇಂಡಿಯನ್ ಆಯಿಲ್ ಕಂಪನಿ ವತಿಯಿಂದ ಗ್ರಾಹಕರಿಗಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ‘ತುಂಬಿಸಿ ಇಂಧನ ಗೆಲ್ಲಿರಿ ಕಾರು’ ವಿಶೇಷ ಆಭಿಯಾನಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.

ಇಲ್ಲಿಯ ಉಣಕಲ್ಲ ಬಳಿಯ ದೊಡ್ಡಮನಿ ಪೆಟ್ರೋಲಿಯಂ ಸರ್ವಿಸಸ್​ನಲ್ಲಿ ನಡೆದ ಸಮಾರಂಭದಲ್ಲಿ ‘ಭರೋ ಫ್ಯೂಯೆಲ್ ಜೋತೋ ಕಾರ್’ ಅಭಿಯಾನಕ್ಕೆ ಇಂಡಿಯನ್ ಆಯಿಲ್ ಕರ್ನಾಟಕ ಪ್ರಧಾನ ವ್ಯವಸ್ಥಾಪಕ (ಸೇಲ್ಸ್) ಆರ್. ಕಾರ್ತಿಕ್ ಹಾಗೂ ಬೆಳಗಾವಿ ವಿಭಾಗೀಯ ಉಪ ಪ್ರಧಾನ ವ್ಯವಸ್ಥಾಪಕ (ಸೇಲ್ಸ್) ಬಿನಯಕುಮಾರ ಅವರು ಅಭಿಯಾನದ ಮಾಹಿತಿ ಫಲಕ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಇಂಡಿಯನ್ ಆಯಿಲ್​ನ ಡಿವಿಜನಲ್ ಇನ್​ಸ್ಟಿಟ್ಯೂಷನಲ್ ಚೀಫ್ ಬಿಜನೆಸ್ ಮ್ಯಾನೇಜರ್ ಗೌಸ್​ಪೀರ ಬಾಷಾ, ಹಿರಿಯ ವ್ಯವಸ್ಥಾಪಕ ಅಮರ ಶ್ರೀನಿವಾಸ, ಅಸ್ಪಾಕ್ ಹಾಗೂ ಅವಳಿನಗರದ ಇತರ ಡೀಲರ್​ಗಳು ಭಾಗವಹಿಸಿದ್ದರು.

ಯಾವುದೇ ಇಂಡಿಯನ್ ಆಯಿಲ್ ಬಂಕ್​ನಲ್ಲಿ 400 ರೂ. ಮೌಲ್ಯದ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಪೆಟ್ರೋಲ್ ಅಥವಾ ಡೀಸೆಲ್ ವಾಹನಕ್ಕೆ ತುಂಬಿಸಿದಾಗ ಅದರ ಪ್ರಿಂಟೆಡ್ ಬಿಲ್ ಪಡೆದು ಅದರಲ್ಲಿನ ಡೀಲರ್ ಕೋಡ್ ಹಾಗೂ ಬಿಲ್ ಸಂಖ್ಯೆಯನ್ನು ಮೊ. 9052155555ಗೆ ಎಸ್​ಎಂಎಸ್ ಕಳುಹಿಸಬೇಕು.

ಆ ಮೂಲಕ ಗ್ರಾಹಕರ ಹೆಸರು ಅಲ್ಲಿ ನೋಂದಣಿಯಾಗುವುದರಿಂದ ಯಾವುದೇ ಅಡೆತಡೆಯಿಲ್ಲದೇ ನೇರವಾಗಿ ಲಾಟರಿ ಅಭಿಯಾನದಲ್ಲಿ ಗ್ರಾಹಕರು ಭಾಗಿಯಾಗಲಿದ್ದಾರೆ. ಬಿಲ್ ಪಡೆದ ಕೂಡಲೇ ಗ್ರಾಹಕರು ಒಂದು ಫೋಟೋ ಕಾಪಿ ಇಟ್ಟುಕೊಳ್ಳಬೇಕು. ದೇಶಾದ್ಯಂತ ಈ ಯೋಜನೆ ಜಾರಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಿಂದ ಗ್ರಾಹಕರು ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಯೋಜನೆಯ ಲಾಭ ಪಡೆಯಬೇಕು ಎಂದು ದೊಡ್ಡಮನಿ ಪೆಟ್ರೋಲಿಯಂನ ರಾಜೀವ ದೊಡ್ಡಮನಿ ಮನವಿ ಮಾಡಿದರು.

ಒಂದು ಎಸ್​ಯುುವಿ ಕಾರ್, ನಾಲ್ಕು ಸಾಮಾನ್ಯ ಕಾರ್, 16 ಬೈಕ್​ಗಳನ್ನು ಗೆಲ್ಲುವ ಅವಕಾಶ ಇದೆ. ಅಲ್ಲದೇ ಪ್ರತಿ ವಾರ 25 ಗ್ರಾಹಕರಿಗೆ ತಲಾ 500 ರೂ. ಹಾಗೂ ಪ್ರತಿ ದಿನ ನೂರು ಜನರಿಗೆ ತಲಾ ನೂರು ರೂ. ಗೆಲ್ಲುವ ಸದವಕಾಶ ಕೂಡ ಇದೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net