

ವಿಟ್ಲ: ಸ್ಥಳೀಯ ನಿವಾಸಿಗಳ ವಿರೋಧಕ್ಕೆ ಮಣಿದ ಪಟ್ಟಣ ಪಂಚಾಯಿತಿ ಅಪ್ಪೆರಿಪಾದೆಯಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದ ಮಲತ್ಯಾಜ್ಯ ಮತ್ತು ಸೇಪ್ಟೇಪ್ ನಿರ್ವಹಣೆ (ಎಫ್.ಎಸ್.ಟಿ.ಪಿ.) ಘಟಕ ಸ್ಥಳಾಂತರಕ್ಕೆ ಮುಂದಾಗಿದೆ. ಸ್ಥಳೀಯರ ಮನವಿ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಸ್ಥಳಕ್ಕೆ ಭೇಟಿ ನೀಡಿ ಅಽಕಾರಿಗಳ ಜತೆಗೆ ಚರ್ಚಿಸಿದರು.
ಸ್ಥಳೀಯ ನಿವಾಸಿಗಳು ಘಟಕದ ಸಮಸ್ಯೆಯ ಬಗ್ಗೆ ನ.೧೨ರಂದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ನೀಡಿದ್ದು, ಇನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ಘಟಕದ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಽಕಾರಿ ಕರುಣಾಕರ್ ವಿ. ವರಿಗೆ ಸೂಚನೆ ನೀಡಿದ್ದರು. ಇದರಂತೆ ಮುಖ್ಯಾಽಕಾರಿ ಕೆಲಸ ಸ್ಥಗಿತಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು. ಆದರೆ ಬುಧವಾರ ಬೆಳಗ್ಗೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದು ಬಳಿಕ ಕಾಮಗಾರಿ ಸ್ಥಗಿತ ಮಾಡಲಾಗಿತ್ತು.
ಶುಕ್ರವಾರ ವಿಟ್ಲಕ್ಕೆ ಆಗಮಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೂ ಸ್ಥಳೀಯರು ಮನವಿ ಸಲ್ಲಿಸಿದ್ದರು. ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ವಿವಿಧ ಕಡೆಗೆ ದೂರು ನೀಡುವುದಕ್ಕೆ ಸ್ಥಳೀಯರು ಮುಂದಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಜನಪ್ರತಿನಿಽಗಳು ಅಽಕಾರಿಗಳ ತಲೆಗೆ ಕಟ್ಟಿ ತಾವು ಬಚಾವು ಆಗುವ ದಾರಿಯನ್ನು ಹುಡುಕಲಾರಂಭಿಸಿದ್ದಾರೆ.
*ಪಟ್ಟಣ ಪಂಚಾಯಿತಿ ಸುದ್ದಿಗೋಷ್ಠಿ: ಚುನಾಯಿತ ಪ್ರತಿನಿಽಗಳ ಆಡಳಿತ ಪ್ರಾರಂಭವಾಗುವ ಮೊದಲು ಆಡಳಿತಾಽಕಾರಿ ಹಾಗೂ ಮುಖ್ಯಾಽಕಾರಿಗಳು ನಿರ್ಣಯ ಮಾಡಿ ಅಪ್ಪೆರಿಪಾದೆಯ ಜಾಗವನ್ನು ಗುರುತಿಸಿದ್ದರು. ಜಾಗದ ಆಸುಪಾಸಿನಲ್ಲಿ ಬಡಕುಟುಂಬದವರು ಇರುವುದರಿಂದ ಮತ್ತು ದೇವರ ಕಟ್ಟೆ ಇರುವುದರಿಂದ ಈ ಭಾಗದಲ್ಲಿ ಮಲತ್ಯಾಜ್ಯ ಘಟಕ ಮಾಡಬಾರದು ಎಂಬುದು ಕೋರಿಕೆಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಹೇಳಿದರು.
ಕೇಂದ್ರ ಸರ್ಕಾರ ಮಲ ತ್ಯಾಜ್ಯ ಶೇಖರಣಾ ಘಟಕವನ್ನು ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮಾಹಿತಿಯಿದ್ದು, ಅಪ್ಪೆರಿಪಾದೆಯ ಜಾಗವನ್ನು ನಿಗದಿಪಡಿಸಿದ್ದು ತಿಳಿದಿಲ್ಲ. ಯೋಜನೆಗೆ ಆಡಳಿತಾವಽಯಲ್ಲಿ ಯಾವುದೇ ಜಾಗವನ್ನು ನಿಗಽಪಡಿಸಿರುವುದಿಲ್ಲ. ಹಲವು ಮಂದಿಯ ಸಹಿಯನ್ನೊಳಗೊಂಡ ದೂರನ್ನು ಆಸುಪಾಸಿನ ನಾಗರಿಕರು ಬಂದು ನೀಡಿದ್ದು, ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. ಆದರೆ ಸಾಮಾನ್ಯ ಸಭೆಗೆ ಆ ವಿಚಾರ ಬಾರದ ಕಾರಣ ಆ ಸಮಯದಲ್ಲಿ ಕ್ರಮ ತೆಗೆದುಕೊಳ್ಳಲಾಗಿಲ್ಲ. ಸ್ಥಳೀಯರು ಶುಕ್ರವಾರ ಸಂಸದ ಬ್ರಿಜೇಶ್ ಚೌಟ ಅವರಿಗೆ ಮನವಿ ನೀಡಿದ್ದು, ಸಂಸದರು ತಕ್ಷಣ ನಿಲ್ಲಿಸಲು ಸೂಚಿಸಿದ ಕಾರಣದಿಂದ ಕಾಮಗಾರಿಯನ್ನು ಸ್ಥಗಿತ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾರ್ಡ್ ೭ರ ಸದಸ್ಯ ರವಿಪ್ರಕಾಶ್ ಮಾತನಾಡಿ, ಘಟಕ ನಿರ್ಮಾಣಕ್ಕೆ ಸಮತಟ್ಟು ಮಾಡುವ ಕಾರ್ಯ ಒಂದೂವರೆ ತಿಂಗಳ ಹಿಂದೆ ನಡೆದಿದೆ. ಆಡಳಿತಾಽಕಾರಿ ಮುಖ್ಯಾಽಕಾರಿ ಕೈಯಲ್ಲಿ ಆಡಳಿತ ಇರದಿದ್ದರೆ ಶಿಲಾನ್ಯಾಸ ಕಾರ್ಯವನ್ನು ನಡೆಸಲಾಗುತ್ತಿತ್ತು. ಅಗಸ್ಟ್‌ನಲ್ಲಿ ಕಾಮಗಾರಿ ನಡೆಸಲು ವರ್ಕ್ ಆರ್ಡರ್ ಲಭಿಸಿದ್ದು, ಶಿಲಾನ್ಯಾಸ ನಡೆದಿಲ್ಲ. ಪೌರ ಕಾರ್ಮಿಕರ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ ನಡೆಸುವ ಸಂದರ್ಭ ಮರ ಕಡಿದಿರುವುದು ಪತ್ತೆಯಾಗಿದೆ. ಬೆಳೆಯುವ ಪಟ್ಟಣಕ್ಕೆ ಮಲ ತ್ಯಾಜ್ಯ ಸಂಸ್ಕರಣಾ ಯೋಜನೆ ಬೇಕಾಗಿದ್ದು, ಅದನ್ನು ವಸತಿ ಪ್ರದೇಶವಿಲ್ಲದ ಜನರಿಗೆ ಸಮಸ್ಯೆಯಿಲ್ಲದ ಪ್ರದೇಶವಾದರೆ ಆಗಬಹುದು ಎಂದು ತಿಳಿಸಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯ ವಸಂತ ಉಪಸ್ಥಿತರಿದ್ದರು.
*ಶಾಸಕರ ಭೇಟಿ: ಶಾಸಕ ಅಶೋಕ್ ಕುಮಾರ್ ರೈ ಅಪ್ಪೆರಿಪಾದೆಯಲ್ಲಿ ಘಟಕ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಮಾತುಗಳನ್ನು ಕೇಳಿದರು. ಊರಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಭಾವನೆಗಳಿಗೆ ತೊಂದರೆಯಾಗುವ ಜತೆಗೆ ಜನರಲ್ಲಿ ಗೊಂದಲ ಏರ್ಪಟ್ಟಿದೆ. ಸಾಧಕ ಬಾಧಕ ನೋಡಿಕೊಂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಜತೆಗೆ ಮಾತುಕತೆ ನಡೆಸಲಾಗುವುದು. ರಾಜಕೀಯ ರಹಿತವಾಗಿ ಅಭಿವೃದ್ಧಿಯಾಗಬೇಕಾಗಿದ್ದು, ಜನರಿಗೆ ತೊಂದರೆಯಾಗಬಾರದು. ಅವಶ್ಯಕತೆಯಿದ್ದರೆ ಬೇರೆಕಡೆ ಸ್ಥಳಾಂತರ ಮಾಡುವ ಕಾರ್ಯ ಮಾಡಲಾಗುವುದು ಎಂದರು. ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಕೆ. ಎಂ. ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಮುಖ್ಯಾಧಿಕಾರಿ ಕರುಣಾಕರ್, ಸ್ಥಳೀಯ ನಿವಾಸಿಗಳು ಹಾಜರಿದ್ದರು.
ಸಮಸ್ಯೆಯಿಲ್ಲದ ಜಾಗ ಹುಡುಕಿ
ಸ್ಥಳ ಪರಿಶೀಲನೆಯ ಬಳಿಕ ಕಂದಾಯ ಅಽಕಾರಿಗಳ ಜತೆಗೆ ಸಭೆಯನ್ನು ನಡೆಸಿದ ಶಾಸಕರು ಜನರಿಗೆ ಸಮಸ್ಯೆಯಾದಂತೆ ಮಲತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಹುಡುಕಿವುದಕ್ಕೆ ಸೂಚನೆ ನೀಡಿದ್ದಾರೆ.
ಜಾಗ ಖಾಸಗಿಯವರದ?
ಸದ್ಯ ಘಟಕ ನಿರ್ಮಾಣ ಕಾಮಗಾರಿಗೆ ಮುಂದಾಗಿರುವ ಜಾಗದಲ್ಲಿ ತಕರಾರು ಇದ್ದು, ೨೦೦೦ನೇ ಇಸವಿಯಲ್ಲಿ ಜಿಲ್ಲಾ ನ್ಯಾಯಾಲಯ ಖಾಸಗಿಯವರ ಸುಪಽಗೆ ನೀಡಿದೆ ಎಂದು ಶಾಸಕರ ಗಮನಕ್ಕೆ ತರಲಾಗಿದೆ. ಆದರೂ ಕಾಮಗಾರಿಗೆ ಮುಂದಾಗಿರುವುದಕ್ಕೆ ತಮ್ಮ ಆಕ್ಷೇಪವಿದೆ ಎಂದು ಹೇಳಿದರು. ಸ್ಥಳೀಯರಾದ ಲಲಿತಾ, ಸಚಿನ್, ಆನಂದ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದರು.