ಆಹಾರ ಉದ್ದಿಮೆದಾರ, ಮಾರಟಗಾರರ ಪರವಾನಿಗೆ ಅಭಿಯಾನ ಇಂದಿನಿಂದ

in
fssai licence issue drive in koppal
Published on

ಕೊಪ್ಪಳ: ಆಹಾರ ಉತ್ಪಾದಕರು, ತಯಾರಕರು, ವಿತರಕರು ಪರವಾನಿಗೆ ಅಥವಾ ನೋಂದಣಿ ಮಾಡಿಕೊಳ್ಳುವ ಅಭಿಯಾನ ಆ.30 ಮತ್ತು 31ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತ ಅಧಿಕಾರಿ ತಿಳಿಸಿದ್ದಾರೆ.
ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರಿಗೆ ನಿರಂತರವಾಗಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ (ಎಫ್​.ಎಸ್​.ಎಸ್​.ಎ) ಪರವಾನಗಿ, ನೋಂದಣಿ ನೀಡುತ್ತಿದೆ. ಅನುಕೂಲ ಮಾಡುವ ಉದ್ದೇಶದಿಂದ ಆ.30 ಮತ್ತು 31ರಂದು ಅಭಿಯಾನ ಹಮ್ಮಿಕೊಂಡಿದ್ದು ಸದುಪಯೋಗಪಡಿಸಿಕೊಳ್ಳಲು ತಿಳಿಸಲಾಗಿದೆ.

ಆಹಾರ ಉತ್ಪಾದಕರು, ವಿತರಕರು ಹಾಗೂ ಮಾರಾಟಗಾರರು ಅಗತ್ಯ ದಾಖಲಾತಿ ಆನ್​ಲೈನ್​ ಮೂಲಕ ಅಥವಾ ಕಚೇರಿಗೆ ಭೇಟಿ ನೀಡಿ ಪಡೆಯಬಹುದು. ಆಧಾರ್​ ಕಾರ್ಡ್​, ೋಟೋ, ವಿದ್ಯುತ್​ ಬಿಲ್​, ಜಿ.ಎಸ್​.ಟಿ., ನಗರ ಸಭೆ ಪರವಾನಿಗೆ, ಲ್ಯಾಬ್​ ರಿಪೋರ್ಟ್​ ಹಾಗೂ ಸೀಲು ಸಲ್ಲಿಸಬೇಕು. ಆನ್​ಲೈನ್​ ಪಾವತಿಗೆ ನೆಟ್​ ಬ್ಯಾಂಕಿಂಗ್​ ಅಥವಾ ಪೋನ್​ ಅವಶ್ಯ.

ಹೆಚ್ಚಿನ ಮಾಹಿತಿಗಾಗಿ ಎಫ್​.ಎಸ್​.ಎಸ್​.ಎ ಜಿಲ್ಲಾ ಕಚೇರಿ ವಿಳಾಸ: ಅಂಕಿತ ಅಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ (ಎಫ್​.ಎಸ್​.ಎಸ್​.ಎ), ಹಳೆ ಜಿಲ್ಲಾ ಆಸ್ಪತ್ರೆ ಆವರಣ, ನಗರ ಸಭೆ ಹತ್ತಿರ, ಕೊಪ್ಪಳ-&583231, ಮೊ.ಸಂ: 8951458114,ಅಥವಾ ಕಚೇರಿ ಎಫ್​.ಎಸ್​.ಓ.ಗಳಾದ ಕೊಪ್ಪಳದ ಮೊ.ಸಂ: 8951458114, ಗಂಗಾವತಿ ಮೊ.ಸಂ: 9482469457, ಕುಫ್ಟಿಗಿ ಮೊ.ಸಂ: 7337663555, ಯಲಬುರ್ಗಾ ಮೊ.ಸಂ: 9916306363ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net