

ಬೆಂಗಳೂರು :ಅಪರಾಧ ಪ್ರಕರಣಗಳಲ್ಲಿ ಸಂಗ್ರಹಿಸುವ ಮಾದರಿಗಳನ್ನು 15 ದಿನದೊಳಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕೆಂದು ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ. ಅಪರಾಧ ಪ್ರಕರಣಗಳ ತನಿಖೆ ತ್ವರಿತಗತಿಯಲ್ಲಿ ನಡೆಯಬೇಕು. ಈ ಸಲುವಾಗಿ ಎ್ಎಸ್‌ಎಲ್ ಎಂದು ಸಂಗ್ರಹಿಸಿದ ಮಾದರಿಯನ್ನು ನಿಗದಿತ ಸಮಯದಲ್ಲಿ ಕಳುಹಿಸಿ ವರದಿ ಪಡೆಯುವ ಪ್ರಯತ್ನ ಮಾಡಬೇಕು ಎಂದು ಎಲ್ಲ ಜಿಲ್ಲಾ ಎಸ್‌ಪಿಗಳಿಗೆ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ಒಂದು ವೇಳೆ 15 ದಿನದೊಳಗೆ ಕಾನೂನು ಪ್ರಕ್ರಿಯೆ ಮುಗಿಯದೆ ಇದ್ದರೇ ನಂತರ ಎ್ಎಸ್‌ಎಲ್‌ಗೆ ಮಾದರಿ ರವಾನಿಸಲು ಆಯಾ ಡಿಸಿಪಿ ಅಥವಾ ಎಸ್‌ಪಿಗಳಿಂದ ಸಹಿ ಪಡೆದು ಪ್ರತ್ಯೇಕವಾಗಿ ವರದಿ ಲಗತ್ತಿಸಬೇಕು. 30 ದಿನಗಳ ನಂತರ ರವಾನಿಸಲು ರಾಜ್ಯ ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿಯಿಂದ ಅನುಮತಿ ಪಡೆಯಬೇಕು. ಇಲ್ಲವಾದರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಇದರ ನಡುವೆ ಪ್ರಕರಣದಲ್ಲಿ ಬಿ ರಿಪೋರ್ಟ್ ವರದಿ ಸಲ್ಲಿಸಬೇಕಾದರೆ, ಸಂಬಂಧಪಟ್ಟ ವ್ಯಕ್ತಿ ಅಸುನೀಗಿದರೆ ಅಥವಾ ಬೇರೆ ಬೆಳವಣಿಗೆ ಆದರೆ ಕೂಡಲೇ ವಾಸ್ತವಾಂಶವನ್ನು ತನಿಖಾಧಿಕಾರಿಗಳು ಎ್ಎಸ್‌ಎಲ್‌ಗೆ ತಿಳಿಸಬೇಕು. ಅವರೊಂದಿಗೆ ಚರ್ಚೆ ನಡೆಸಿ ತನಿಖೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಎ್ಎಸ್‌ಎಲ್ ಸ್ಯಾಂಪಲ್ ಕಳುಹಿಸುವ ಕುರಿತಂತೆ ಈ ಹಿಂದೆ ಹೊರಡಿಸಿದ್ದ ಆದೇಶ ರದ್ದಾಗಿದ್ದು, ಪರಿಷ್ಕೃತ ಆದೇಶ ಪಾಲಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.