

ಬಳ್ಳಾರಿ : ರೈತರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಫ್ರೂಟ್ಸ್ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಅದ್ವಿತೀಯ ಸಾಧನೆ ಮಾಡಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಳ್ಳಾರಿ ಜಿಲ್ಲಾಡಳಿತ ನೀಡಿದ ನಿಗದಿತ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ ಮೊದಲ ಜಿಲ್ಲೆಯಾಗಿದೆ ಎಂದು ತಿಳಿಸಿದ್ದಾರೆ.
ಬರಗಾಲ ಹಿನ್ನಲೆಯಲ್ಲಿ ರೈತರು ತಮ್ಮ ಬೆಳೆ ನಷ್ಟ ಪರಿಹಾರ ಪಡೆಯಲು ಮತ್ತು ರಾಜ್ಯ ಸರ್ಕಾರವು ಫ್ರೂಟ್ಸ್ ತಂತ್ರಾಂಶದ ಮೂಲಕ ಪರಿಹಾರ ಒದಗಿಸಲು ನೋಂದಣಿಯು ಕಡ್ಡಾಯವಾಗಿದ್ದು, ರೈತರಿಗೆ ಜಾಗೃತಿ ಮೂಡಿಸಿ, ಫ್ರೂಟ್ಸ್ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆಯು ಆಗ್ರಸ್ಥಾನದಲ್ಲಿರುವುದು ವಿಶೇಷವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ರೈತರಿಗೆ ನಿರಂತರ ಅರಿವು ಮತ್ತು ಜಾಗೃತಿಯಿಂದ ಈ ಕಾರ್ಯವು ಯಶಸ್ವಿಗೊಂಡಿದೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಭೂಮಿ ತಂತ್ರಾಂಶದಲ್ಲಿ 4,56,020 ಪ್ಲಾಟ್‌ಗಳಿವೆ. ಕೃಷಿಯೇತರ ಭೂಮಿ 58,310 ಪ್ಲಾಟ್‌ಗಳು, ಖಾಸಗಿ ಭೂಮಿ 3,97,918 ಪ್ಲಾಟ್‌ಗಳು, ಬೆಳೆ ಸಮೀಕ್ಷೆಗೆ ಒಳಪಟ್ಟ ಭೂಮಿ 47,553 ಪ್ಲಾಟ್‌ಗಳು, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾದ ಭೂಮಿ 3,50,365 ಪ್ಲಾಟ್‌ಗಳು, ಅದಕ್ಕೂ ಮೊದಲು ನೋಂದಣಿಯಾದ ಭೂಮಿ 2,94,598 ಪ್ಲಾಟ್‌ಗಳು ಮತ್ತು 55,767 ಪ್ಲಾಟ್‌ಗಳು ಬಾಕಿ ಇವೆ. ಒಟ್ಟು ಶೇ. 84.08 ರಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಫ್ರೂಟ್ಸ್ ನೋಂದಣಿಗೆ ಸಂಬಂಧಪಟ್ಟಂತೆ ಜಿಲ್ಲೆಯ ರೈತರಿಂದ ಉತ್ತಮವಾದ ಸ್ಪಂದನೆ ದೊರೆತಿದೆ. ನಿಗದಿತ ಗುರಿ ತಲುಪಿರುವುದು. ನಿಜಕ್ಕೂ ಸಂತೋಷದ ಸಂಗತಿ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಪ್ರಕಟಣೆ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.