

ಬೆಳಗಾವಿ: ಮಾವಿನ ಮರ ಏರಿ ಹಣ್ಣು ಕೀಳಲು ಹೋಗಿದ್ದ ವ್ಯಕ್ತಿ ಆಯ ತಪ್ಪಿ ಬಿದ್ದು ಮೃತಪಟ್ಟ ಘಟನೆ ವಡಗಾವಿ ರಾಜವಾಡಾ ಕಟ್ಟಡದ ಆವರಣದಲ್ಲಿ ಭಾನುವಾರ ನಡೆದಿದೆ.
ವಡಗಾವಿ- ಯಳ್ಳೂರು ರಸ್ತೆಯ ಬಸ್ ನಿಲ್ದಾಣದ ಬಳಿಯ ನಿವಾಸಿ ಲಕ್ಕಪ್ಪ ಕರೆಪ್ಪನವರ (48) ಮೃತ ವ್ಯಕ್ತಿ. ಶಹಾಪುರ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.