ವೃದ್ಧರಿಗೆ ಹಣ್ಣು ವಿತರಣೆ

15 HANUR 3
ಕೌದಳ್ಳಿ ಗ್ರಾಮದ ಕರುಣಾ ಭವನ ವೃದ್ಧಾಶ್ರಮದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್ ದತ್ತೇಶ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ವೃದ್ಧರಿಗೆ ಹಣ್ಣು ವಿತರಿಸಿದರು. ವೆಂಕಟೇಗೌಡ, ಮಂಜು, ಸೀಗನಾಯಕ, ಬಾಬು, ಮುತ್ತುರಾಜು ಇತರರು ಇದ್ದರು.
Published on

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಕರುಣಾ ಭವನ ವೃದ್ಧಾಶ್ರಮದಲ್ಲಿ ಗುರುವಾರ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್. ದತ್ತೇಶ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ವೃದ್ಧರಿಗೆ ಹಣ್ಣು ವಿತರಿಸಿದರು.


ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಗೌಡ ಮಾತನಾಡಿ, ಡಾ.ದತ್ತೇಶ್‌ಕುಮಾರ್ ಸಾಮಾಜಿಕ ಕಳಕಳಿ ಹೊಂದಿದ್ದು, ಸಮಾಜ ಸೇವೆಯ ಜತೆಗೆ ಶಿಕ್ಷಣ ಸಂಸ್ಥೆಯನ್ನು ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದು, ಈ ಬಗ್ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೆ ಕ್ಷೇತ್ರದ ಜನತೆಗೆ ಸೇವೆ ಒದಗಿಸುವ ಸಲುವಾಗಿ ಹನೂರಿನಲ್ಲೇ ಮಾನಸ ಫೌಂಡೇಷನ್ ಸಂಸ್ಥೆ ತೆರೆದು ಹಳ್ಳಿಹಳ್ಳಿಗೆ ವಾಹನವನ್ನು ಕಳುಹಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಿಕೊಡಲು ಶ್ರಮಿಸಿದ್ದಾರೆ. ಹಾಗಾಗಿ ಇವರ ಸೇವಾ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಕೇಕ್ ಕತ್ತರಿಸಿ ವೃದ್ಧರಿಗೆ ತಿನಿಸಲಾಯಿತು. ಮುಖಂಡರಾದ ಪುಟ್ಟರಾಜು, ರವಿ, ಅನಿಲ್, ಮಂಜು, ವೆಂಕಟಾಚಲ, ಮುತ್ತುರಾಜು, ಮಂಜು, ಮೀನಾ, ನಾಗೇಂದ್ರ, ಸೀಗನಾಯಕ, ಮಾನಸ ಫೌಂಡೇಷನ್ ಸಿಬ್ಬಂದಿ ರವಿ, ಬಾಬು, ಶಿವು ಇದ್ದರು.

ಫೋಟೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net