4.50 ಲಕ್ಷ ರೂ. ಪಡೆದು ಮನೆ ನೀಡದೆ ವಂಚನೆ

download
Published on

ಮಂಗಳೂರು: ನೀರುಮಾರ್ಗ ಗ್ರಾಮದ ಕುಲಶೇಖರ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆ ಮಾರಾಟ ಮಾಡುವುದಾಗಿ 4.50 ಲಕ್ಷ ರೂ. ಪಡೆದು, ಕೊನೆಗೆ ಪ್ಲಾೃಟ್ ನೀಡದೆ ಬೇರೆಯವರಿಗೆ ಮಾರಾಟ ಮಾಡಿದ ದಂಪತಿ ವಿರುದ್ಧ ಮಂಗಳೂರು ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿಗಳಾದ ಪ್ರಶಾಂತ್ ರಸ್ಕಿನಾ ಮತ್ತು ಅವರ ಪತ್ನಿ ಜಾಯ್ಸ ರೀನಾ ರಸ್ಕಿನಾ ಅವರು ವಂಚನೆ ಮಾಡಿರುವುದಾಗಿ ಮುರಳೀಧರ ಪೈ ಅವರು ದೂರು ನೀಡಿದ್ದಾರೆ. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಶಾಖೆಯ ಚೆಕ್‌ನ್ನು 2016 ಜ.19ರಂದು ರೀನಾ ರಸ್ಕಿನಾ ಅವರಿಗೆ ಪಾವತಿಸಿದ್ದರು. ಆ ಬಳಿಕ ಹಲವು ಬಾರಿ ಪ್ಲಾೃಟ್‌ನ್ನು ಸೇಲ್ ಡೀಡ್ ನೋಂದಣಿ ಮಾಡಿ ಕೊಡುವಂತೆ ಒತ್ತಾಯಿಸಿದ್ದರು. ಆರೋಪಿಗಳು ಫಾರ್ಮ್ ನಂ.9 ಮತ್ತು 11 ರ ನೆಪವೊಡ್ಡಿ ಖರೀದಿಸಿದ ಪ್ಲಾೃಟನ್ನು ಮುರಳೀಧರ ಅವರಿಗೆ ನೀಡದೆ ಅದನ್ನು ಶಶಿಕಲಾ ದೇವಾಡಿಗ ಎಂಬವರ ಹೆಸರಿಗೆ ಮಾರಾಟ ಮಾಡಿ ನಂಬಿಕೆ ದ್ರೋಹ ಎಸಗಿ ವಂಚಿಸಿ, ಮೋಸ ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net