ಯೋಗದಿಂದ ಸಂಸ್ಕೃತಿ ಇಮ್ಮಡಿ

10Jaggu3-web
ಬೆಳಗಾವಿಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರವು ಪತಂಜಲಿ ಯೋಗಪೀಠದ 30ನೇ ಸಂಸ್ಥಾಪನಾ ದಿನ ಅಂಗವಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ವಿಶೇಷ ಸಂದರ್ಶನದಲ್ಲಿ ಯೋಗಗುರು ಭವರಲಾಲ್ ಆರ್ಯ ಅವರಿಗೆ ಸ್ಮರಣಿಕೆ ನೀಡಿ ಸತ್ಕರಿಸಿದರು. ಬಾಲಕೃಷ್ಣ ಕೊಳೇಕರ, ಸುರೇಖಾ ಪಾಟೀಲ, ಅಕ್ಷಯ ಘೋರ್ಪಡೆ, ಆರ್.ಜೆ. ಮೀರಾ, ಕಿರಣ ಚೌಗಲಾ ಇತರರಿದ್ದರು.
Published on

ಬೆಳಗಾವಿ: ವೈದ್ಯರು ಮಾತ್ರೆ, ಔಷಧಗಳ ಜತೆಯಲ್ಲಿ ಯೋಗವನ್ನು ಔಷಧವಾಗಿ ಪಾಲಿಸುವಂತೆ ಹೇಳುವ ಕಾಲ ದೂರವಿಲ್ಲ ಎಂದು ಪತಂಜಲಿ ಯೋಗಪೀಠದ ರಾಜಪ್ರಭಾರಿ, ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಅಭಿಪ್ರಾಯಪಟ್ಟರು.

ಇಲ್ಲಿನ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರವು ಪತಂಜಲಿ ಯೋಗಪೀಠದ 30ನೇ ಸಂಸ್ಥಾಪನಾ ದಿನ ಅಂಗವಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು. ಪತಂಜಲಿ ಯೋಗ ಪೀಠವು ದೇಶಾದ್ಯಂತ ಯೋಗ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯ ಮಾಡುತ್ತಿದೆ. ಯೋಗ ಅಷ್ಟೇ ಅಲ್ಲದೆ ಆಯುರ್ವೇದ, ಸ್ವದೇಶಿ, ಗುರುಕುಲ ಶಿಕ್ಷಣ ಪದ್ಧತಿ, ಗ್ರಾಮೀಣ ಅಭವೃದ್ಧಿಗಾಗಿ ವಿವಿಧ ಕೆಲಸ ಮಾಡುತ್ತಿದೆ ಎಂದರು.
ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಮದ್ದಾಗಿದೆ. ಇವತ್ತು ಎಲ್ಲರೂ ಒತ್ತಡದ ಜೀವನ ಎದುರಿಸುತ್ತಿದ್ದಾರೆ. ಪ್ರಾಣಾಯಾಮ, ಧ್ಯಾನ ಹಾಗೂ ಸರಳ ಆಸನಗಳನ್ನು ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಬಹುದು ಎಂದರು. ಸಮುದಾಯ ರೇಡಿಯೋ ಕೇಂದ್ರದ ಮೂಲಕ ಭಾರತೀಯ ಯೋಗ ಪ್ರಚಾರ ಕುರಿತು ಹೆಚ್ಚಿನ ಕಾರ್ಯಕ್ರಮ ಬಿತ್ತರಿಸುವಂತೆ ಸಲಹೆ ನೀಡಿದರು.

ಹುಕ್ಕೇರಿ ಯೋಗ ಶಿಕ್ಷಕ, ಹುಕ್ಕೇರಿ ತಾಲೂಕು ಪ್ರಭಾರಿ ಬಾಲಕೃಷ್ಣ ಕೊಳೇಕರ, ಸುರೇಖಾ ಪಾಟೀಲ, ಅಕ್ಷಯ ಘೋರ್ಪಡೆ, ಆರ್.ಜೆ. ಮೀರಾ, ಕಿರಣ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net