

ಚಿಕ್ಕೋಡಿ: ಸ್ಪರ್ಧಾತ್ಮಕ ಯುಗದಲ್ಲಿ ವಚನ ಸಾಹಿತ್ಯ ಸಂಸ್ಕಾರವಂತ ಸಮಾಜ ನಿರ್ಮಾಣಕ್ಕೆ ಭದ್ರಬುನಾದಿಯಾಗಿದೆ ಎಂದು ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ದಬಸವ ದೇವರು ಹೇಳಿದರು.
ಚಿಕ್ಕೋಡಿ ತಾಲೂಕಿನ ಖಡಕಲಾಟ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ಈಚೆಗೆ ಅಮಾವಾಸ್ಯೆ ಮಾಸಿಕ ಶಿವಾನುಭವ ಶಿವಯೋಗ ಬೆಳಗು 19 ಹಾಗೂ ಹುಬ್ಬಳ್ಳಿ ಮೂರುಸಾವಿರ ಮಠದ ಲಿಂ. ಡಾ. ಮೂಜಗಂ ಸ್ಮರಣೋತ್ಸವ ಹಾಗೂ ವೈರಾಗ್ಯ ನಿಧಿ ಅಕ್ಕನ ಬಳಗ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬಸವಣ್ಣನವರು ಕಟ್ಟಿದ ಸಮಾಜ ,ಅವರ ವಿಚಾರಗಳು ನಮಗೆ ಮಾದರಿ. ವಚನಗಳು ಕನ್ನಡಾಂಬೆಯ ಒಡವೆಗಳು. ಕೃಷಿಕ ಸಮಾಜ ನಿರ್ಮಿಸಿದ ಬಸವಣ್ಣವರು ವಿಶ್ವ ಕಂಡ ಮಹಾನ್ ದಾರ್ಶನಿಕರು ಎಂದರು.
ಖಡಕಲಾಟ ಶಿವಬಸವ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಂಗೀತಗಾರ ಮಂಜುನಾಥ ಅಂಬರಶಟ್ಟಿ ಭಕ್ತಿ ಗೀತೆ ಹಾಡಿದರು. ಲಿಂ. ಮೂಜಗಂ, ಬಸವ, ಅಕ್ಕನ ಪೂಜೆ ನಡೆಯಿತು. ಗುರುವಂದನೆ ಸಲ್ಲಿಸಲಾಯಿತು. ಪೂಜ್ಯರು ಸಸಿಗೆ ನೀರೆರೆದು ಅಕ್ಕನ ಬಳಗ ಉದ್ಘಾಟಿಸಲಾಯಿತು.