

ಮುದಗಲ್: ಇಲ್ಲಿನ ಕುಂಬಾರಪೇಟೆಯ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಬುಧವಾರ ಸಂಜೆ ಸಂಪನ್ನಗೊಂಡಿತು. ಜಾತ್ರೆ ನಿಮಿತ್ತ ಬಸವಣ್ಣ ಮೂರ್ತಿಗೆ ರುದ್ರಾಭಿಷೇಕ, ಎಲೆಚೆಟ್ಟು ಸೇವೆ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸಂಜೆ ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರ ಸಮ್ಮುಖದಲ್ಲಿ ಅಲಂಕೃತ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಹಿಳೆಯರಿಂದ ಅದ್ದೂರಿ ಮಹಾರಥೋತ್ಸವ ಜರುಗಿತು. ರಥ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ತೂರಿ ಭಕ್ತಿ ಸಮರ್ಪಿಸಿದರು.
ಪ್ರಮುಖರಾದ ಶರಣಪ್ಪ ಸಜ್ಜನ್, ಶರಣಪ್ಪ ಕುಂಬಾರ, ವೀರಭದ್ರಯ್ಯ ಮೂಲಿಮನಿ, ಪ್ರಭು ಕಂಡಕ್ಟರ್, ಮಹಾಂತೇಶ ಅಕ್ಷತಿ, ಈರಪ್ಪ ಗುಡೂರು, ಮಹಾಂತೇಶ ಗದ್ದಿ, ವೀರೇಶ ಕುಂಬಾರ, ವೀರೇಶ ಖೇಣೆದ, ಅಮರೇಶ ತಲೇಖಾನ್, ಸಂಗಪ್ಪ ಕೊಡೆಕಲ್, ಶಶಿಕಲಾ ಭೋವಿ, ತೋಟಮ್ಮ, ಲಕ್ಷ್ಮೀ ಇತರರಿದ್ದರು.