

ಮುರಗೋಡ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ೇತ್ರಗಳಲ್ಲೂ ಮಹಿಳೆಯರು ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಕುಟುಂಬ ಸಬಲವಾಗುತ್ತಿದೆ ಎಂದು ಮಾತೋಶ್ರೀ ಶಿವಯೋಗಿನಿ ಹಾರುಗೂಪ್ಪ ಹೇಳಿದರು.
ಸಮೀಪದ ಮಹಾಂತ ದುರದುಂಡೇಶ್ವರ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಿಂ. ಮಹಾಂತ ಶಿವಯೋಗಿಗಳ 53ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಮಾತನಾಡಿದರು.
ಮುಧೋಳ ಬಸವಲಿಂಗ ಸ್ವಾಮೀಜಿ, ತಾರಿಹಾಳದ ಅಡವೇಶ ದೇವರು, ಬೈಲವಾಡ ಶಂಕರ ದೇವರು, ಟಪ್ರಭಾದ ವಿರೂಪಾ ಸ್ವಾಮೀಜಿ, ಮರೆಗುದ್ದಿ ಪ್ರಭು ತೋಂಟದಾರ್ಯ ಸ್ವಾಮೀಜಿ, ಕದಳಿ ವೇದಿಕೆ ಅಧ್ಯೆ ಪ್ರೇಮಾ ಅಂಗಡಿ, ನೇಗಿನಾಳ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾಂತೇಶ ಮತ್ತಿಕೂಪ್ಪ, ಅನಿತಾ ಮೆಟಗುಡ್ಡ, ಕಾಂಗ್ರೆಸ್ ಯುವ ಮುಖಂಡ ಕಾರ್ತಿಕ ಪಾಟೀಲ, ಉದ್ಯಮಿ ಉಮೇಶ ಹಿರೇಮಠ, ಧರ್ಮದರ್ಶಿಗಳಾದ ಅಶೋಕ ಶೆಟ್ಟರ, ವಿ.ಬಿ.ದೇಸಾಯಿ, ಎಸ್.ವಿ.ಕಂಠಿ, ಸಂತೋಷ ಹಿರೇಮಠ ಇತರರಿದ್ದರು.