ಮದುವೆಮನೆಯಿಂದ ನೇರ ಪರೀಕ್ಷಾ ಕೇಂದ್ರಕ್ಕೆ!

Girl
Published on

ಬೆಂಗಳೂರು: ಕೊರಳಿಗೆ ತಾಳಿ ಬೀಳುತ್ತಲೇ ಮದುಮಗಳು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾಳೆ.

ಗುರುವಾರ ಸ್ನಾತಕೋತ್ತರ ಕೋರ್ಸ್​ಗಳ ಪರೀಕ್ಷೆ ನಡೆಯುತ್ತಿತ್ತು. ಜ್ಞಾನಭಾರತಿ ಕಲ್ಯಾಣ ಮಂಟದಲ್ಲಿ ಬೆಳಗ್ಗೆ 10.30ರಿಂದ 11.15ರ ಸಮಯದಲ್ಲಿ ಹರ್ಷಿತಾ ಮದುವೆಗೆ ಮುಹೂರ್ತ ಫಿಕ್ಸ್ ಆಗಿತ್ತು. ತಾಳಿ ಕಟ್ಟಿದ ಬಳಿಕ ನೇರವಾಗಿ ಅಂದರಹಳ್ಳಿಯಲ್ಲಿರುವ ಆಚಾರ್ಯ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಅವರು ಆಗಮಿಸಿದರು.

ಆಗ ಸಮಯ 11.45 ಆಗಿತ್ತು, ಪರೀಕ್ಷೆ ಆರಂಭವಾಗಿ 45 ನಿಮಿಷವಾಗಿತ್ತು. ಆತಂಕದಲ್ಲೇ ಬಂದ ಹರ್ಷಿತಾಗೆ ಬೆಂ.ವಿವಿ ಮೌಲ್ಯಮಾಪನ ಕುಲಸಚಿವ ಸಿ. ಶಿವರಾಜು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರು. ಅವರ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net