ನಾಳೆಯಿಂದ ಚಮಕೇರಿ ಗ್ರಾಮದಲ್ಲಿ ಜಾತ್ರೆ

26Athni1(Shivyogi swmji)
Published on

ಅಥಣಿ: ತಾಲೂಕಿನ ಚಮಕೇರಿ ಗ್ರಾಮದ ಗುರು ಸಾಧು ಚಕ್ರಮವರ್ತಿ ಸದಾಶಿವ ಶಿವಯೋಗಿಗಳಮಠದ ಜಾತ್ರಾ ಮಹೋತ್ಸವ ಏ.28 ರಿಂದ ಏ.30ರ ವರೆಗೆ ಜರುಗಲಿದೆ.

ಏ.28ರಂದು ಸದಾಶಿವಮಠ(ಬಬಲಾದಿ) ಚಮಕೇರಿಯ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಪುರಾಣ ಮಂಗಲ ಕಾರ್ಯಕ್ರಮ, ಸಾಮೂಹಿಕ ಭಜನೆ ಜರುಗಲಿದೆ. ನಾವಲಗಿಯ ಶ್ರೀಶೈಲ ಸ್ವಾಮೀಜಿ ಹಿರೇಮಠ, ಗೋಕಾಕದ ದಯಾನಂದ ಶರಣರು, ಮಾರುತಿ ಶರಣರು, ದುಂಡಪ್ಪ ಶರಣರು ಆಗಮಿಸುವರು. ನಿರ್ಮಲವಾದ ಮನವೇ ಮಡಿ ಎಂಬ ವಿಷಯದ ಕುರಿತು ಉಪನ್ಯಾಸ ಜರುಗಲಿದೆ.

ಏ.29ರಂದು ರಥೋತ್ಸವ, ಜಗಜ್ಯೋತಿ ಬಸವೇಶ್ವರ ಬೈಲಾಟ, ರೇಣುಕಾ ಮಹಾತ್ಮೆ ನಡೆಯಲಿದೆ. ಏ.30ರಂದು ಸುಮಂಗಲಿಯರ ಕುಂಭ ಮೆರವಣಿಗೆ, ಸಾಮೂಹಿಕ ವಿವಾಹ ನೆರವೇರಲಿದೆ. ಏ.1ರಂದು ಜೋಡು ಕುದುರೆ ಗಾಡಿ ಶರ್ಯತ್ತು, ಸೈಕಲ್, ಓಟದ ಸ್ಪರ್ಧೆ ಮತ್ತು ಜಂಗೀ ನಿಕಾಲಿ ಕುಸ್ತಿ ನಡೆಯಲಿವೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net