ನಾಳೆಯಿಂದ ಇಟನಾಳ ದುರ್ಗಾದೇವಿ ಜಾತ್ರೆ

Durgadevi
Published on

ಗುರ್ಲಾಪುರ: ಸಮೀಪದ ಇಟನಾಳ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ಮಹೋತ್ಸವ ಜನವರಿ 1ರಿಂದ 5ರ ವರೆಗೆ ವಿಜೃಂಭಣೆಯಿಂದ ಜರುಗುವುದು.

ಜ.1ರಂದು ಬೆಳಗ್ಗೆ 6.30ಕ್ಕೆ ಓಂ ಪೂಜೆ, 9.30ಕ್ಕೆ ದೇವಿಗೆ ಅಭಿಷೇಕ, 10.30ಕ್ಕೆ 101 ಕುಂಭಮೇಳ, ಸಂಜೆ 5.30ಕ್ಕೆ ಹರದೇಶಿ ನಾಗೇಶಿ ಚೌಡಕಿ ಪದಗಳು. ಜ. 2ರಂದು ಬೆಳಗ್ಗೆ 10.30ಕ್ಕೆ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾಸೋಹ ರತ್ನ ದಾನೇಶ್ವರ ಹಾಗೂ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಶ್ರೀ ಸಿದ್ದೇಶ್ವರ ಆಶ್ರಮದ ಸಿದ್ದೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮವಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಮಹೇಂದ್ರ ತಮ್ಮಣ್ಣವರ, ಶಿವರಾಜ ಪಾಟೀಲ ಇತರರು ಪಾಲ್ಗೊಳ್ಳುವರು.

ಬೆಳಗ್ಗೆ 10.30ಕ್ಕೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಜ. 3ರಂದು ರಾತ್ರಿ 6ಕ್ಕೆ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ. ಜ. 4ರಂದು ಬೆಳಗ್ಗೆ 9.15ಕ್ಕೆ ದುರ್ಗಾದೇವಿ ಹಾಗೂ ಲಕ್ಷ್ಮೀದೇವಿ ಪಾದಪೂಜೆ. ಜ.5ರಂದು ಬೆಳಗ್ಗೆ 9.15ಕ್ಕೆ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಜರುಗುವುದು. ರಾತ್ರಿ 9.30ಕ್ಕೆ ರಸಮಂಜರಿ ಕಾರ್ಯಕ್ರಮವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net