ನಾಳೆಯಿಂದ ರಸ್ತೆಗಾಗಿ ಉಪವಾಸ ಸತ್ಯಾಗ್ರಹ

Protest Symbol
Published on

ಬೆಳಗಾವಿ: ನಗರದ ಮೂರನೇ ರೈಲ್ವೆ ಗೇಟ್​ ಮೇಲ್ಸೇತುವೆ ರಸ್ತೆ ಗುಂಡಿಗಳಿಂದ ರೋಸಿ ಹೋಗಿರುವ ಸ್ಥಳಿಯರು ಆ. 21ರಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಬೃಹತ್​ ಫಲಕ ಅಳವಡಿಸಲಾಗಿದೆ. 3ನೇ ರೈಲ್ವೆ ಗೇಟ್​ ಮೇಲ್ಸೇತುವೆ ದುರಸ್ತಿ ಕಾಮಗಾರಿಗೆ ಆಗ್ರಹಿಸಿ ಸ್ಥಳಿಯರು ಈಗಾಗಲೇ ಅನೇಕ ಸಲ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆ ಮಾಡಿದ ಪ್ರತಿ ಸಲವು ದುರಸ್ತಿ ಭರವಸೆ ನೀಡುತ್ತಲೆ ಬಂದಿದ್ದಾರೆ. ಆದರೆ, ಕಾರ್ಯ ಆಗಿಲ್ಲ. ಹೀಗಾಗಿ ಇದೇ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಕ್ಕೆ ಸ್ಥಳಿಯರು ಮುಂದಾಗಿ ಮಂಗಳವಾರ ಬೃಹತ್​ ಫಲಕ ಅಳವಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net