

ಬೆಲಹೊಂಗಲ: ತಾಲೂಕಿನ ಸುೇತ್ರ ಆನಿಗೋಳ ಗ್ರಾಮದ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವವು ಮೇ 12ರಿಂದ 14ರ ವರೆಗೆ ಜರುಗಲಿದೆ. 12ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ನೆರವೇರುವುದು. ರಾತ್ರಿ 9.30ಕ್ಕೆ ನೇಗಿಲಿಗಿ ಸಿಂಗಾರ ರೆತನಿಗೆ ಬಂಗಾರ ಎಂಬ ನಾಟಕ ಪ್ರದರ್ಶನವಾಗಲಿದೆ. 13ರಂದು ಬೆಳಗ್ಗೆ 10ಕ್ಕೆ ರಾಮಲಿಂಗೇಶ್ವರರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. 14ರಂದು ಸಂಜೆ 7 ಗಂಟೆಗೆ ಕಡಬಿನ ಕಾಳಗ ಜರುಗಲಿದೆ. ನಿತ್ಯ ಅನ್ನಪ್ರಸಾದ ಏರ್ಪಡಿಸಲಾಗಿದೆ ಎಂದು ರಾಮಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪಕ ಕಮಿಟಿ ಅಧ್ಯ ವೀರಣ್ಣ ಮರಕುಂಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.