

ಬೆಲಹೊಂಗಲ: ಪಟ್ಟಣದ ಚನ್ನಮ್ಮ ಉಪನಗರದ ದಾನಮ್ಮದೇವಿ ದೇವಸ್ಥಾನದ 16ನೇ ವರ್ಷದ ಜಾತ್ರಾ ಮಹೋತ್ಸವ ಏ.25ರಿಂದ ಮೇ 7ರ ವರೆಗೆ ಜರುಗಲಿದೆ. ಏ.25ರಂದು ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಷಟಸ್ಥಲ ಧ್ವಜಾರೋಹಣ ನೆರವೇರಲಿದೆ. ಏ.26ರಂದು ಸಂಜೆ ಜರುಗುವ ಅಧ್ಯಾತ್ಮಿಕ ಪ್ರವಚನವನ್ನು ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಉದ್ಘಾಟಿಸುವರು. 28ರಂದು ಬೆಳಗ್ಗೆ ದಾನಮ್ಮದೇವಿ ತಾಯಿ ಸಿರಸಮ್ಮಳಿಗೆ ಸೀಮಂತ, ಸಂತಾನರಹಿತ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಭಕ್ತೀಗಿತೆಗಳ ಧ್ವನಿ ಸುರುಳಿ ಬಿಡುಗಡೆ, ಏ.30ರಂದು ದೇವಿಯ ಜನನ, ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ, ಮೇ 2ರಂದು ಜಂಗಮದಂಪತಿಗಳ ಪಾದಪೂಜೆ ಹಾಗೂ ದಾನಮ್ಮದೇವಿ ಬಷ್ಟಗಿ ಕಾರ್ಯಕ್ರಮ ಜರುಗಲಿದೆ. ಮೇ 4ರಂದು ದೇವಿಗೆ ಮಾಂಗಲ್ಯಧಾರಣ ಹಾಗೂ ಅತಾರೋಪಣ, ಮೇ 5ರಂದು ತೇರಿನ ಕಳಸದ ಪೂಜೆ, ಕಳಸಾರೋಹಣ, ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಗೋಕಾಕ ಶೂನ್ಯ ಸಂಪಾದನಾಮಠದ ಮುರುರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೇ 6ರಂದು ದಚೇವಿಗೆ ದೆವದ ವತಿಯಿಂದ ಭಕ್ತರಿಂದ ಉಡಿ ತುಂಬುವುದು. ಸುಮಂಗಲೆಯರಿಗೆ ಉಡಿ ತುಂಬುವುದು. ಆಧ್ಯಾತ್ಮಿಕ ಪ್ರವಚನದ ಮಹಾಮಂಗಳ ಜರುಗುವುದು. ಮೇ 7ರಂದು ಮಹಾಪೂಜೆ, ಮಹಾಪ್ರಸಾದ ಸಂಜೆ ಮಹಾರಥೋತ್ಸವ ಜರುಗುವುದು ಎಂದು ಕಮಿಟಿ ಅಧ್ಯ ಪ್ರಮೋದಕುಮಾರ ವಕ್ಕುಂದಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.