ರೋಟರಿ ಸಂಸ್ಥೆಯಿಂದ ಸಮಾಜ ಸೇವೆ ಅಪಾರ

10GKK1
Published on

ಗೋಕಾಕ: ಜಗತ್ತಿನಾದ್ಯಂತ ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿ ಕಾರ್ಯಕ್ರಮ ಅನುಷ್ಠಾನದಿಂದ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾ ರೋಟರಿ ಸಂಸ್ಥೆಯ ಅಶೋಕ ನಾಯಿಕ ಹೇಳಿದರು.

ನಗರದ ರೋಟರಿ ರಕ್ತ ಭಂಡಾರದಲ್ಲಿ ಭಾನುವಾರ ರೋಟರಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ನೂತನ ಸದಸ್ಯರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವಾ ಮನೋಭಾವದಿಂದ ಸಮಾಜ ಸೇವೆ ಮಾಡುವ ರೋಟರಿ ಸಂಸ್ಥೆಯಲ್ಲಿ ನೂತನ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದಾನಿಗಳು ಸಾಕಷ್ಟಿದ್ದು ಅದರ ಸದುಪಯೋಗಪಡಿಸಿಕೊಳ್ಳುವ ಕಾರ್ಯವಾಗಬೇಕು. ಗೋಕಾಕ ರೋಟರಿ ಸಂಸ್ಥೆ ಸ್ವಂತ ಕಟ್ಟಡದೊಂದಿಗೆ ರಕ್ತ ಭಂಡಾರ, ಮುಕ್ತಿ ವಾಹನ, ಆರೋಗ್ಯ ಶಿಬಿರ ಹಾಗೂ ಶೈಣಿಕ ಮಾದರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದರು.

ಹುಬ್ಬಳ್ಳಿ ರೋಟರಿ ಸಂಸ್ಥೆಯ ವಾಸುಕಿ ಸಂಜಿ ಸಂಸ್ಥೆ ನಿಯಮ ಹಾಗೂ ಸದಸ್ಯರ ಪಾತ್ರ ಕುರಿತು ತರಬೇತಿ ನೀಡಿದರು.

ಅಭಯ ಶಿಂಧೆ, ಸ್ಥಳಿಯ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಸೋಮಶೇಖರ ಮಗದುಮ, ಸತೀಶ ನಾಡಗೌಡ, ಪ್ರಕಾಶ ವರದಾಯಿ, ಬಸವರಾಜ ಹುಳ್ಳೇರ, ಪೃಥ್ವಿರಾಜ ಯಂಡಿಗೇರಿ ಇತರರಿದ್ದರು. ಸಚಿನ ಜಾಧವ ಸ್ವಾಗತಿಸಿದರು. ಸತೀಶ ಬೆಳಗಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net