ಮರು ಮೌಲ್ಯಮಾಪನದಿಂದ ತಾಲೂಕಿಗೆ ಪ್ರಥಮ

HRP Trisha
ತ್ರಿಷಾ
Published on

ಹರಪನಹಳ್ಳಿ: ತಾಲೂಕಿನ ಬಂಗಿ ಬಸಪ್ಪ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತ್ರಿಷಾಗೆ ಮರು ಮೌಲ್ಯಮಾಪನದಲ್ಲಿ 12 ಅಂಕ ಬಂದಿವೆ. ಒಟ್ಟು 564 ಮಾರ್ಕ್ಸ್ ಆಗಿದ್ದು, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕನ್ನಡ ವಿಷಯದಲ್ಲಿ ಮೊದಲಿಗೆ 80 ಅಂಕ ಬಂದಿದ್ದವು. ಇದರಿಂದ ಬೇಸರಗೊಂಡು ತ್ರಿಷಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೆಚ್ಚುವರಿ 12 ಅಂಕ ಗಳಿಸಿದ್ದು, ಒಟ್ಟಾರೆ 564 ಅಂಕ ಪಡೆದಿದ್ದಾರೆ.

ಇದರಿಂದ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದು, ಶಾಲೆ ಶಿಕ್ಷಕರು, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net