ರಾಮಮಂದಿರದಿಂದ ಕಾಂಗ್ರೆಸ್‌ನಲ್ಲಿ ತಳಮಳ

web3
ಕಬ್ಬೂರ ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ ನೀಡಿದರು. ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಹಾಲಿಂಗ ಹಂಜಿ, ಡಾ.ರಮೇಶ ಮದಿಹಳ್ಳಿ, ಮಡ್ಡೆಪ್ಪ ನಿರ್ವಾಣಿ, ಬಾಳು ಕುಕನೂರ ಇತರರಿದ್ದರು.
Published on

ಕಬ್ಬೂರ: ಸರ್ಕಾರ ರೈತರಿಗೆ ಬರ ಪರಿಹಾರ ನೀಡದೆ, ಗ್ಯಾರಂಟಿಗಳ ಅಬ್ಬರದಲ್ಲಿ ಕೇಂದ್ರದ ಮೇಲೆ ಗೂಬೆ ಕೂಡ್ರಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ಪಟ್ಟಣದಲ್ಲಿ ಶಾಸಕರ ಅನುದಾನದಡಿ ಶೆಟ್ಟೆವ್ವ ದೇವಸ್ಥಾನಕ್ಕೆ 5 ಲಕ್ಷ ರೂ. ವೆಚ್ಚದ ಭವನ, ದುರ್ಗಾಮಾತಾ ದೇವಸ್ಥಾನಕ್ಕೆ 5 ಲಕ್ಷ ರೂ.ವೆಚ್ಚದ ಭವನ ಮತ್ತು ಮಗದುಮ್ ತೋಟದ ಹತ್ತಿರದ ಹನುಮಾನ ದೇವಸ್ಥಾನಕ್ಕೆ 5 ಲಕ್ಷ ರೂ.ವೆಚ್ಚದ ಭವನ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಭಕ್ತರಿಗೆ ಅನುಕೂಲವಾಗುವಂತೆ ಗುತ್ತಿಗೆದಾರರು ಗುಣಮಟ್ಟದ ಭವನ ನಿರ್ಮಿಸಬೇಕು. ರಾಮಮಂದಿರ ಲೋಕಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಳಮಳ ಉಂಟಾಗಿದೆ ಎಂದರು. ಹಿರಾ ಶುಗರ್ ನಿರ್ದೇಶಕ ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಹಾಲಿಂಗ ಹಂಜಿ, ಡಾ.ರಮೇಶ ಮದಿಹಳ್ಳಿ, ಮಡ್ಡೆಪ್ಪ ನಿರ್ವಾಣಿ, ಬಾಳು ಕುಕನೂರ, ರವಿ ಜಿವನಿ, ಶಿವಾನಂದ ಮಠಪತಿ, ಸುನೀಲ ಇನಾಮದಾರ, ಬಾಳಪ್ಪ ಮಗದುಮ್, ಶ್ರೀಶೈಲ ತೇರದಾಳೆ, ಮಹಾದೇವ ಜಿವನಿ, ಬಸಲಿಂಗ ಕಾಡೇಶಗೋಳ, ಸಿದ್ಧಲಿಂಗ ಪೂಜೇರಿ, ಮಲ್ಲು ಜಿವನಿ, ಸಂಜು ಕಲ್ಯಾಣಕರ, ಬಾಳೇಶ ಮದಿಹಳ್ಳಿ, ರಮೇಶ ಮಾದರ, ಶಂಕರ ಸಾಂಬ್ರೆ, ಬೀರಪ್ಪ ಮದಿಹಳ್ಳಿ, ನಿಂಗಪ್ಪ ಮದಿಹಳ್ಳಿ, ಕಾಮನ್ನ ಗೆವಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net