ಪುರಸಭೆಯಿಂದ ಸ್ವಚ್ಛತಾ ಶ್ರಮದಾನ

01-10.MDL.01
ಮುದಗಲ್‌ನಲ್ಲಿ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ನಭಿ ಕಂದಗಲ್, ಡಾ.ವಿನೋದ ಕುಮಾರ, ಮಹ್ಮದ್ ಜಿಲಾನಿ ಪಾಷಾ ಇದ್ದರು.
Published on

ಮುದಗಲ್: ಸ್ವಚ್ಛತಾ ಹೀ ಸೇವಾ ಅಭಿಯಾನದ ಅಡಿ ಮುಖ್ಯಾಧಿಕಾರಿ ಎಂ.ನಭಿ ಕಂದಗಲ್ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಪಟ್ಟಣದ ಅನೇಕ ಕಡೆ ಭಾನುವಾರ ಸ್ವಚ್ಛತಾ ಶ್ರಮದಾನ ಮಾಡಿದರು.

ಪೊರಕೆ ಹಿಡಿದ ಸಿಬ್ಬಂದಿಗಳು ಸರ್ಕಾರಿ ಆಸ್ಪತ್ರೆ, ಸಾರಿಗೆ ಬಸ್ ನಿಲ್ದಾಣ ಹಾಗೂ ಕಂದಾಯ ಭವನ ಸೇರಿ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಸ ಗೂಡಿಸಿ ಶ್ರಮದಾನ ಮೂಲಕ ಸ್ವಚ್ಛತೆ ಮಾಡಿದರು.

ಸರ್ಕಾರಿ ಆಸ್ಪತ್ರೆಯ ವೈಧ್ಯರಾದ ವಿನೋದ ಕುಮಾರ, ಸಿಬ್ಬಂದಿಗಳಾದ ಮುಕ್ತುಮ್ ಸಾಬ, ಬಸವರಾಜ ಹಾಗೂ ಪುರಸಭೆ ಸಿಬ್ಬಂದಿಗಳಾದ ಮಹ್ಮದ ಜಿಲಾನಿ ಪಾಷಾ, ಮಾಳಿಂಗರಾಯ, ಆರೀಫ್ ಬೇಗಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net