ಜೆಸಿಐನಿಂದ ಸಮಾಜಮುಖಿ ಕಾರ್ಯ

01010
Published on

ಗೋಕಾಕ: ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸಿ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಜೆಸಿಐ ಸಂಸ್ಥೆ ರಾಷ್ಟ್ರಾದ್ಯಂತ ಶ್ರಮಿಸುತ್ತಿದೆ ಎಂದು ಜೆಸಿಐ ಸಂಸ್ಥೆಯ ರಾಜ್ಯ ಉಪಾಧ್ಯಕ್ಷೆ ರೇಖಾ ರಾಥೋರ ಹೇಳಿದ್ದಾರೆ.

ಶುಕ್ರವಾರ ಇಲ್ಲಿಯ ವಿವೇಕಾನಂದ ನಗರದಲ್ಲಿ ಜೆಸಿಐ ಸಂಸ್ಥೆಯ ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿದರು. ದೇಶದ ವಿವಿಧ ಸಂಸ್ಕೃತಿಯ ಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ. ಅವಕಾಶ ಸದುಪಯೋಗಪಡಿಸಿಕೊಂಡು ಆತ್ಮವಿಶ್ವಾಸದೊಂದಿಗೆ ಕಾರ್ಯಪ್ರವೃತ್ತರಾದರೆ ಯಶಸ್ಸು ನಿಶ್ಚಿತ ಎಂದರು.

ಜೆಸಿಐ ಸಂಸ್ಥೆಯ ವಲಯ ಅಧ್ಯಕ್ಷ ವಿನಾಯಕ ಅರಮನೆ, ಶ್ರೀಧರ ನಾಯಕ, ರಾಮದುರ್ಗ ಜೆಸಿಐ ಅಧ್ಯಕ್ಷ ಎಚ್.ಕೆ.ದಾಸರ, ಜೆಸಿಐ ಅಧ್ಯಕ್ಷ ರಜನಿಕಾಂತ ಮಾಳೋದೆ, ಕಾರ್ಯದರ್ಶಿ ಶೇಖರ ಉಳ್ಳಾಗಡ್ಡಿ, ಪದಾಧಿಕಾರಿಗಳಾದ ಮನಿಷಾ ಮಾಳೋದೆ, ಮೀನಾಕ್ಷಿ ಸವದಿ, ಸರ್ವೇಶ ಸವದಿ, ವಿಷ್ಣು ಲಾತೂರ, ಜಿ.ಆರ್.ನಿಡೋಣಿ, ಕೆಂಪಣ್ಣ ಚಿಂಚಲಿ, ವಿ.ಎಸ್.ತಡಸಲೂರ ಇದ್ದರು.

ಅನ್ನಪೂರ್ಣಾ ಉಳ್ಳಾಗಡ್ಡಿ ಸ್ವಾಗತಿಸಿದರು. ಭಾಗೀರಥಿ ನಂದಗಾಂವಿ ನಿರೂಪಿಸಿದರು. ನೇತ್ರಾವತಿ ಲಾತೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net