ದಾಸೋಹ ಆದರ್ಶದಿಂದ ಬದುಕು ಉನ್ನತಿ

11blh2 negunahal news
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
Published on

ಬೈಲಹೊಂಗಲ:  ಗುರು ಮುಟ್ಟಿ ಗುರುವಾಗುವ ಧರ್ಮ ನಮ್ಮದಾಗಿದೆ. ಗುರು ನೀಡಿದ ಇಷ್ಟಲಿಂಗ ಪೂಜೆ, ಶಿವಯೋಗ ಸಾಧನೆ, ಕಾಯಕ, ದಾಸೋಹದ ಆದರ್ಶ ಸನ್ಮಾರ್ಗದ ಮೂಲಕ ನಮ್ಮನ್ನು ಗುರು ಸ್ಥಾನಕ್ಕೆ ಕರೆದೊಯ್ಯುತ್ತವೆ ಎಂದು ಹುಣಸೀಕಟ್ಟಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು ಹೇಳಿದರು.

ತಾಲೂಕಿನ ನೇಗಿನಹಾಳ ಗ್ರಾಮದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವತತ್ತ್ವ ಸಮಾವೇಶದಲ್ಲಿ ಮಾತನಾಡಿ, ಗುರುಗಳು ನೀಡಿದ ಸಂಸ್ಕಾರವನ್ನು ಶ್ರದ್ಧೆ, ನಿಷ್ಠೆಯಿಂದ ಪಾಲಿಸಬೇಕು. ಅಂದಾಗ ಜೀವನದಲ್ಲಿ ಮುಕ್ತಿ ಲಭಿಸಲು ಸಾಧ್ಯ ಎಂದರು.

ಹೊಳಿಹೊಸುರ ಮಡಿವಾಳೇಶ್ವರ ಮಠದ ಪ್ರಭುರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಡಿವಾಳೇಶ್ವರರು ನೇಪಾಳದ ರಾಜ ಕಾಣಿಕೆಯಾಗಿ ನೀಡಿದ ವಜ್ರ ಖಚಿತ ಸಿಂಹಾಸನವನ್ನು ಅವನ ಮುಂದೆಯೇ ತುಂಡರಿಸಿ ಅಲ್ಲಿನ ಬಡವರಿಗೆ ಹಂಚಿ ನನ್ನದು ದಾಸೋಹ ಧರ್ಮವಾಗಿದೆ ಎಂದು ಸಾರಿದ್ದಾರೆ ಎಂದರು.

ವಿರೇಶ್ವರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಪ್ರವಚನ ನೀಡಿದರು. ಕಾಂಗ್ರೆಸ್ ಮುಖಂಡ ನಾನಾಸಾಹೇಬ ಪಾಟೀಲ, ಗ್ರಾಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ದಾಸೋಹಿಗಳಾದ ನಿರಂಜನ ಮೆಟ್ಯಾಲ, ಮಡಿವಾಳಪ್ಪ ಲಕ್ಕನಗೌಡ್ರ, ರತ್ನಮ್ಮ ಪಡಸಲಗಿ, ಪಾರ್ವತೆವ್ವ ಚನ್ನಪ್ಪಗೌಡರ, ಶೋಭಾ ಆಲದಕಟ್ಟಿ, ಕಾವೇರಿ ಮೆಳವಂಕಿ, ಚಂದ್ರು ಮೆಳವಂಕಿ, ಸಿಂಹಣ್ಣ ನರಸನ್ನವರ, ಚಂದ್ರಶೇಖರ ನರಸನ್ನವರ, ಕೀರಪ್ಪ ನರಸನ್ನವರ, ಸುಭಾಷ ನರಸನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net