

ಸಂಬರಗಿ: ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಂದ ರಾ-ಜ್ಯ-ದಲ್ಲಿ ಹಲವಾರು ಅ-ಭಿ-ವೃ-ದ್ಧಿ ಕಾಮಗಾರಿಗಳು ಕುಂಟಿತಗೊಂಡಿವೆ. ನಾವು ವಿರೋಧ ಪಕ್ಷದಲ್ಲಿ ಇದ್ದು, ಅವರು ಮಾಡುವ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಶಾಸಕ ರಮೇಶ ಜಾರ-ಕಿ-ಹೊ-ಳಿ ಹೇಳಿದರು.
ಸಮೀಪ-ದ ಖಿಳೇಗಾಂವ ಗ್ರಾ-ಮ-ದ-ಲ್ಲಿ ಮಂಗ-ಳ-ವಾ-ರ ಬಸವೇಶ್ವರ ದೇವಸ್ಥಾನದ ದರ್ಶನ ಪಡೆದು ಬಳಿ-ಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿ-ಗೆ ಅಧಿಕಾರ ಚುಕ್ಕಾಣಿ ಹಿಡಿಯಲಿ-ದೆ. ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಯಾವುದೇ ಪರಿಣಾಮ ಆಗುವುದಿಲ್ಲ, ಈ ವಿಷ-ಯ-ವಾ-ಗಿ ಮುಖ್ಯ-ಮಂತ್ರಿ ತೆಗೆ-ದು-ಕೊ-ಳ್ಳು-ವ ನಿರ್ಧಾ-ರ-ಕ್ಕೆ ನಾವು ಬದ್ಧರಾ-ಗಿ-ದ್ದೇ-ವೆ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ರವಿ ಪೂಜಾರಿ, ಬಸವೇಶ್ವರ ದೇವಸ್ಥಾನದ ಚೇರ್ಮನ್ ಸತೀಶ ಹೊನ್ನಾವಗೋಳ ಇತರ-ರು ಇದ್ದ-ರು.