

ಮುರಗೋಡ: ಮಠ-ಮಂದಿರಗಳ ಜಾತ್ರೆ, ಉತ್ಸವಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಾತ್ಮರ ಹಿತವಚನ ಆಲಿಸುವುದರಿಂದ ಮಾನಸಿಕ ನೆಮ್ಮದಿ
ಲಭಿಸುತ್ತದೆ ಎಂದು ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು. ದೊಡವಾಡದ ಜಡೀಸಿದ್ಧೇಶ್ಚರ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಆಧ್ಯಾತ್ಮಿಕ ಪ್ರವಚನದ ಆಸಕ್ತಿ, ಮನರಂಜನೆ, ಕ್ರೀಡೆ ಹಾಗೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ಕೆಂಗೇರಿ ಶಿವಚಿದಂಬರೇಶ್ವರ ಮಠದ ದಿವಾಕರ ದಿಕ್ಷೀತ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ, ಸಿಎ ಮಹಾಂತೇಶ ದಾಡಿಗುಂಡಿ, ತಾಪಂ ಮಾಜಿ ಸದಸ್ಯ ಸುರೇಶ ಮ್ಯಾಕಲ, ಮಲ್ಲಯ್ಯ ಮಾಸ್ತಮರಡಿ, ಮಹಾಂತೇಶ ಬಡಿಗೇರ, ಭೀಮು ಹೂಗಾರ, ರಂಗಪ್ಪ ಕೂಲಕಾರ, ಬಸವರಾಜ ಹೂಗಾರ, ವಿನಾಯಕ ಮಾಸ್ತಮರಡಿ ಬಸವರಾಜ ಬ್ಯಾಳಿ ಇತರರಿದ್ದರು. ವಿನಾಯಕ ಪಾಸಲಕರವರ ದುರ್ಗಾ ಮೇಲೋಡಿಯಸ್ ಕಲಾ ತಂಡ ಹಾಸ್ಯ ರಸಮಂಜರಿ ಕಾರ್ಯಕ್ರಮ ಪ್ರದರ್ಶಿಸಿತು.