ಡಯಾಲಿಸಿಸ್​ ಕೇಂದ್ರದಿಂದ ಸಾಕಷ್ಟು ಅನುಕೂಲ

23KHANAPUR2
Published on

ಖಾನಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಹೊಸ ಡಯಾಲಿಸಿಸ್​ ಯಂತ್ರ ಅಳವಡಿಸಲಾಗಿದ್ದು, ಪ್ರತಿದಿನ ನಾಲ್ಕು ರೋಗಿಗಳು ಡಯಾಲಿಸಿಸ್​ ಮಾಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ್​ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಅಳವಡಿಸಿದ್ದ ಎರಡು ಡಯಾಲಿಸಿಸ್​ ಯಂತ್ರಗಳ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಮೂತ್ರಪಿಂಡದ ಸಮಸ್ಯೆಯಿರುವವರಿಗೆ ಡಯಾಲಿಸಿಸ್​ ಕೇಂದ್ರ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದ್ದು, ಸದುಪಯೋಗ ಪಡೆಯಬೇಕು ಎಂದರು. ಕೇಂದ್ರದ ವಿಶೇಷ ತ ಡಾ. ಮಹೇಶ ಕೋಣೆ, ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಕಿವುಡಸಣ್ಣವರ, ಡಾ.ನಾರಾಯಣ ವಡ್ಡಿನವರ, ಬಿಜೆಪಿ ಮುಖಂಡ ಸಂಜಯ ಕುಬಾಲ, ಗುಂಡು ಟೋಪಿನಕ್ತಿ, ಸುನೀಲ ಮಡ್ಡಿಮನಿ, ಪ್ರಕಾಶ ನೀಲಜ್ಕರ, ವಿಠ್ಠಲ ಕರ್ಮಲ್ಕರ, ರಾಜೇಂದ್ರ ರೆಕಾ, ಚಂಗಪ್ಪ ಬಚೋಲ್ಕರ್​, ಮೋಹನ ಪಾಟೀಲ, ಬಾಬಾ ದೇಸಾಯಿ, ರವಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net