ಸಹಕಾರಿಯಿಂದ ಅನುಕೂಲ

5Sambaragi2
Published on

ಸಂಬರಗಿ: ಕಷ್ಟದಲ್ಲಿರುವ ರೈತರಿಗೆ ಸಾಲ ನೀಡಿ ಸಂಘ ಅನುಕೂಲ ಕಲ್ಪಿಸುತ್ತಿದೆ ಎಂದು ಜೈ ಹನುಮಾನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಮಹಾದೇವ ಕೋರೆ ಹೇಳಿದರು.

ಸಮೀಪದ ಮದಭಾವಿ ಗ್ರಾಮದಲ್ಲಿ ಜೈ ಹನುಮಾನ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಂಘದಿಂದ ರೈತರಿಗೆ ಸಾಲ ವಿತರಸಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಸಹಕಾರದಿಂದ ಸಂಘಗಳು ಪ್ರಗತಿಯತ್ತ ಸಾಗುತ್ತಿವೆ. ಸಂಘದಿಂದ ಸದಸ್ಯರಿಗೆ 1 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಎಂದರು.

ಸಂಘದ ನಿರ್ದೇಶಕರಾದ ದಾದಾಸಾಹೇಬ ಮೇತ್ರಿ, ಹನುಮಂತ ತೊಡಕರ, ಸಿದ್ದಪ್ಪ ಪೋತದಾರ, ಮಹಾದೇವ ಕಾಂಬಳೆ, ವಿಜಯಾನಂದ ಮೇತ್ರಿ, ಮಹಾದೇವ ಮಾಳಿ, ಮಾರುತಿ ಪಾಟೀಲ, ಬಾಹುಬಲಿ ಡಿಗ್ರಜ, ಗೋಪಾಲ ಅವಳೆ, ಮುರೆಗೇಶ ಶ್ಯಾಮನವರ ಮುಖ್ಯ ಕಾರ್ಯನಿರ್ವಾಹಕ ಪರಶುರಾಮ ಬಾಡಗಿ, ಕುಮಾರ ಕೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net