ಕೇಂದ್ರದಿಂದ ರಾಜ್ಯಕ್ಕೆ 4,500 ಇಲೆಕ್ಟ್ರಿಕಲ್​ ಬಸ್​

26blh1 press meet news
Published on

ಬೈಲಹೊಂಗಲ: ಜನರ ಪ್ರಯಾಣದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಪಿಎಂ ಇ&ಡೆವ್​ ಯೋಜನೆಯಡಿ 4,500 ಬಸ್​ ನೀಡಿ, ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಿಎಂ ಇ&ಡೆವ್​ ಯೋಜನೆಯಡಿ ರಾಜ್ಯಕ್ಕೆ 4500 ಇಲೆಕ್ಟ್ರಿಕ್​ ಬಸ್​ಗಳನ್ನು ನೀಡಿದ ಹಿನ್ನೆಲೆ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಲೆಕ್ಟ್ರಿಕ್​ ಬಸ್​ಗಳ ಹಂಚಿಕೆಯ ಮೊದಲ ಹಂತದಲ್ಲಿಯೇ ದೇಶದ 5 ಪ್ರಮುಖ ನಗರಗಳಿಗೆ ನೀಡಿರುವ ಒಟ್ಟು 10,900 ಬಸ್​ಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿರುವುದು ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಕೇಂದ್ರ ಬೃಹತ್​ ಕೈಗಾರಿಕೆ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ಪ್ರಯತ್ನದಿಂದ ರಾಜ್ಯಕ್ಕೆ ಅತಿ ಹೆಚ್ಚು ಬಸ್​ಗಳು ಹಂಚಿಕೆಯಾಗಿವೆ. ರಾಜ್ಯ ಸರ್ಕಾರ ಕೇಂದ್ರದ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಾಗ ಮಾತ್ರ ರಾಜ್ಯಕ್ಕೆ ಹೆಚ್ಚಿನ ಯೋಜನೆ ಹರಿದು ಬರುತ್ತವೆ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಅನಗತ್ಯವಾಗಿ ಇಲ್ಲ ಸಲ್ಲದ ಆರೋಪ ಹೊರಸಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಮಾಡುತ್ತಿದೆ. ಕೇಂದ್ರದ ಅನುದಾನ ತರಲು ಸಿಎಂ ಮುಂದಾಗಬೇಕೆಂದು ಒತ್ತಾಯಿಸಿದರು.

ಜೆಡಿಎಸ್​ ಜಿಲ್ಲಾಧ್ಯ ಶಂಕರ ಮಾಡಲಗಿ, ಬಿಜೆಪಿ ಗ್ರಾಮೀಣ ಜಿಲ್ಲಾ ಉಪಾಧ್ಯ ಗುರು ಮೆಟಗುಡ್ಡ ಮಾತನಾಡಿ, ರಾಜ್ಯ ಸರ್ಕಾರ ಪದೇ ಪದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ವಿನ@ ಅವರ ಯೋಜನೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಮಂಡಲ ಅಧ್ಯರಾದ ಸುಭಾಸ ತುರಮರಿ, ಸುಭಾಸ ಬಾಗೇವಾಡಿ, ಗುರುಪಾದ ಕಳ್ಳಿ, ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ, ನಿಂಗಪ್ಪ ಚೌಡನ್ನವರ, ಬಾಳನಗೌಡ ಪಾಟೀಲ, ಸಚಿನ್​ಕಡಿ, ಪ್ರಶಾಂತ ಅಮ್ಮಿನಬಾವಿ, ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ಉಮೇಶ ಕಾದ್ರೊಳ್ಳಿ, ಆನಂದ ಮೂಗಿ, ಮಲ್ಲಿಕಾರ್ಜುನ ಮೆಟಗುಡ್ಡ, ಚಂದನ ಕೌಜಲಗಿ, ಮಡಿವಾಳಪ್ಪ ಚಳಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net