ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ಅನುಕೂಲ

23 Jaggu 7
Published on

ಬೆಳಗಾವಿ: ಕೃಷಿ ವಿಜ್ಞಾನ ಕೇಂದ್ರವು ಈ ಭಾಗದಲ್ಲಿ ಸ್ಥಾಪಿತಗೊಂಡ ನಂತರ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೈತರಿಗೆ ತಂತ್ರಜ್ಞಾನವನ್ನು ಸಮರ್ಪಕವಾಗಿ ತಿಳಿಸುತ್ತಿದೆ. ಈ ಮೂಲಕ ಕೃಷಿ ಉತ್ಪಾದಕತೆ ಅಧಿಕಗೊಳಿಸಲು ಸಹಕಾರಿಯಾಗಿದೆ. ಕೃಷಿ ವಿಜ್ಞಾನಿಗಳ ತಾಂತ್ರಿಕ ಮಾಹಿತಿಯಿಂದ ಕೃಷಿಯಲ್ಲಿ ಅಧಿಕ ಲಾಭಗಳಿಸಲು ಅನುಕೂಲವಾಗಿದೆ ಎಂದು ಚಚಡಿ ಗ್ರಾಮದ ಮಿಲೆನಿಯರ್​ ರೈತ ಪ್ರಶಸ್ತಿ ಪುರಸತ ನಾಗರಾಜ ದೇಸಾಯಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್​&ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಚರಿಸಲಾದ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಎಸ್​.ಎಸ್​. ಹಿರೇಮಠ, ಕೇಂದ್ರದ ವಿಜ್ಞಾನಿ ಎಸ್​.ಎಂ. ವಾರದ ಮಾತನಾಡಿದರು. ಮಿಲೆನಿಯರ್​ ರೈತ ಪ್ರಶಸ್ತಿ ವಿಜೇತ ನಾಗರಾಜ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ರೈತರಾದ ವೀರಭದ್ರಪ್ಪ ಸಂಪಗಾಂವ, ಬಾಳಪ್ಪ ನಿಜೆಪ್ಪ ಅವರನ್ನು ಸತ್ಕರಿಸಿದರು. ಕಾರ್ಯಕ್ರಮದಲ್ಲಿ 50ಕ್ಕಿಂತ ಅಧಿಕ ರೈತರು ಭಾಗವಹಿಸಿದ್ದರು. ಕೇಂದ್ರದ ೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಕೇಂದ್ರದಲ್ಲಿ ನಿರ್ಮಿಸಿರುವ ಕೃಷಿ ಮತ್ತು ತೋಟಗಾರಿಕಾ ಪ್ರಾತ್ಯಕೆ ಟಕಗಳಿಗೆ ರೈತರನ್ನು ಭೇಟಿ ಮಾಡಿಸಿದರು. ವಿಜ್ಞಾನಿಗಳಾದ ಜಿ.ಬಿ. ವಿಶ್ವನಾಥ ಸ್ವಾಗತಿಸಿದರು. ಪ್ರವಿಣ ಯಡಹಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net