ಶ್ರೀಗಳಿಂದ ಅಕ್ಷರ ಹಾಗೂ ಅನ್ನದಾಸೋಹ

16 HDLP 02
ಹೂವಿನಹಡಗಲಿ ಹಿರೇಮಲ್ಲನಕೇರಿ ಮಠದಲ್ಲಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಅಖಿಲಭಾರತ ವೀರಶೈವ ಮಹಾಸಭಾದ ನಾಮಫಲಕವನ್ನು ಅನಾವರಣಗೊಳಿಸಿದರು. ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಎಂ.ಬಸವಲಿಂಗಸ್ವಾಮೀಜಿ, ಉಪಾಧ್ಯಕ್ಷ ಕೆ.ಕೊಟ್ರೇಶ, ಖಜಾಂಚಿ ಎಂ.ಎನ್.ಮಂಜುನಾಥ, ಇತರರಿದ್ದರು.
Published on

ಹೂವಿನಹಡಗಲಿ: ಹಾನಗಲ್ಲ ಕುಮಾರೇಶರು ಅಕ್ಷರ ಮತ್ತು ಅನ್ನದಾಸೋಹದ ಮಹತ್ವವನ್ನು ನಾಡಿಗೆ ಸಾರಿದರು ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಹಿರೇಮಲ್ಲನಕೇರಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಮಾತನಾಡಿದರು.

ಸ್ವಾಮೀಜಿಗಳು ಸಮಾಜಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಅವರ ಆಶಯದಂತೆ ವೀರಶೈವ ಸಮಾಜ ನಡೆದುಕೊಂಡು ಬಂದಿದೆ. ಅಕ್ಷರ ಹಾಗೂ ಅನ್ನದಾಸೋಹವನ್ನು ಈ ನಾಡಿನಲ್ಲಿ ಹೆಚ್ಚಿಸಿದ ಕೀರ್ತಿ ಅವರದ್ದಾಗಿದೆ.

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿ ಈ ಭಾಗದ ಅನೇಕ ಬಡಮಕ್ಕಳಿಗೆ ಅಕ್ಷರ ದಾಸೋಹ ಮಾಡಿದ್ದಾರೆ. ವೀರಶೈವರು ಈ ನಾಡಿನಲ್ಲಿ ಸಾಹಿತ್ಯ ಪರಂಪರೆಯನ್ನು ಕಟ್ಟಿದ್ದಾರೆ. ತಾಲೂಕಿನಲ್ಲಿ ವೀರಶೈವರ ಸಂಖ್ಯೆ ಹೆಚ್ಚಿದ್ದು ಅವರನ್ನು ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net