ಕ್ರೀಡೆಯಿಂದ ಮನೋದೈಹಿಕ ಬೆಳವಣಿಗೆ

23ckd1
Published on

ಚಿಕ್ಕೋಡಿ: ಅಪರ ಜಿಲ್ಲಾ ಆರೋಗ್ಯ ಇಲಾಖೆಯು ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯ ವೈದ್ಯರು ಹಾಗೂ ಸಿಬ್ಬಂದಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಗಡೇದ ಹೇಳಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೆಲ್ತ್ ಪ್ರೀಮಿಯರ್ ಲೀಗ್-2024 4 ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನೋದೈಹಿಕ ಬೆಳವಣಿಗೆ ಸಾಧ್ಯ ಎಂದರು.

ಕ್ರೀಡಾಕೂಟದ ನೇತೃತ್ವ ವಹಿಸಿದ್ದ ಕಚೇರಿ ಅಧೀಕ್ಷಕ ನವೀನ ಗಂಗರೆಡ್ಡಿ ಮಾತನಾಡಿ, ಕ್ರೀಡಾಮನೋಭಾವನೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಡಾ.ಮಹೇಶ ನಾಗರಭಟ್ಟ, ಡಾ.ಶಾಂತಾರಾಮ ಬಾಗೇವಾಡಿ, ನಿಕಟಪೂರ್ವ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ, ಉತ್ತಮಸಿಂಗ್ ರಜಪೂತ, ಜಿ.ಜಿ.ಕುಲಕರ್ಣಿ, ದೀಪಕ ಚಿನ್ನಾರಿ, ದೀಪಕ ಅಗ್ನಿಹೊತ್ರಿ, ರಾಜು ದತ್ತವಾಡೆ, ಜಗದೀಶ ಹುಲಕುಂದ, ರಾಮಚಂದ್ರ ಕರೋಶಿ, ಗಿರೀಶ ಕುಲಕರ್ಣಿ, ಎಚ್. ಸಿದ್ದು, ಕುಮಾರ ಚೌಗಲಾ, ಮಹಾಂತೇಶ ಯಾದಗುಡೆ, ನಿರಂಜನ ಭೀಮನಾಯ್ಕ, ಮಂಜುನಾಥ ಕಾಂಬಳೆ, ಮಂಜು ಚೌಗಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net