

ಚಿಕ್ಕೋಡಿ: ಪ್ರತಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜತೆಗೆ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಸಹಕಾರಿಯಾಗುತ್ತದೆ ಎಂದು ಜೊಲ್ಲೆ ಶಿಕ್ಷಣ ಸಂಸ್ಥೆ ಮುಖ್ಯಆಡಳಿತಾಧಿಕಾರಿ ಡಾ.ಶಿರೀಷ ಕೇರೂರ ಹೇಳಿದರು.
ತಾಲೂಕಿನ ಯಕ್ಸಂಬಾದ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಿವಶಂಕರ ಜೊಲ್ಲೆ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಆಸಕ್ತಿ ಹಾಗೂ ಅಭಿರುಚಿ ಅನುಗುಣವಾಗಿ ತರಬೇತಿ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ವಿ.ಆರ್.ಭಿವಸೆ ಮಾತನಾಡಿ, ವಿದ್ಯಾರ್ಥಿಗಳು ನಿರಂತರವಾಗಿ ಕ್ರಿಯಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಏಕಾಗ್ರತೆಗೊಳ್ಳುತ್ತದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಡಿ.ಆರ್.ಸರಡಗಿಕರ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್‌ಸಿಸಿ ತರಬೇತುದಾರ ಸಂದೀಪ ಮಗದುಮ್ಮ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಅತ್ಯುತ್ತಮ ಪಥಸಂಚಲನ ಪ್ರದರ್ಶಿಸಿದ ಮಾರ್ತಂಡ ತಂಡವನ್ನು ಪ್ರೋತ್ಸಾಹಿಸಲಾಯಿತು.
ಪ್ರೇರಣಾ ಶಕ್ತಿ ಹಾಗೂ ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಮಂಡಳಿ ಸದಸ್ಯರಾದ
ಸುಜಾತಾ ಕಬಾಡೆ, ಲತಾ ವಾಳಕೆ, ಅನುಸಯಾ ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಆರ್.ಬಿ.ಚಮಕಲೆ ಇತರರಿದ್ದರು. ಮಯೂರಿ ಜಾಧವ. ಪೂರ್ವಾ ವಾಲೀಕರ ಹಾಗೂ ಪ್ರತಿಜ್ಞಾ ಧರ್ಮೋಜೆ ಕಾರ್ಯಕ್ರಮನಿರ್ವಹಿಸಿದರು.